ಜೀರಿಗೆಯು ತನ್ನ ಪೋಷಕಾಂಶಗಳಿಂದ ಅನೇಕ ಖಾಯಿಲೆಗಳು ಬಾರದಂತೆ ತಡೆಯುವುದಲ್ಲದೇ, ತೂಕ ಇಳಿಕೆಗೆ ಸಹಾಯಕಾರಿಯಾಗಿದೆ. ಜೀರಿಗೆ ಹೇಗೆಲ್ಲಾ ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿಯಿರಿ.
photo credit social media
ಜೀರಿಗೆಯು ತನ್ನ ಪೋಷಕಾಂಶಗಳಿಂದ ಅನೇಕ ಖಾಯಿಲೆಗಳು ಬಾರದಂತೆ ತಡೆಯುವುದಲ್ಲದೇ, ತೂಕ ಇಳಿಕೆಗೆ ಸಹಾಯಕಾರಿಯಾಗಿದೆ.
ಚರ್ಮ ಸೌಂದರ್ಯವನ್ನು ಸುಧಾರಿಸಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೀಗೆ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿ ಜೀರಿಗೆಗೆ ಇದೆ.
ಸಾಂಕ್ರಾಮಿಕ ರೋಗಗಳ ನಡುವೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅತಿಮುಖ್ಯ. ಕಾಫಿ ಅಥವಾ ಚಹಾ ಕುಡಿಯುವ ಬದಲು ಆಗಾಗ್ಗೆ ಜೀರಿಗೆಯಿಂದ ತಯಾರಿಸಿದ ಪಾನೀಯವನ್ನು ಸೇವನೆ ಮಾಡುವುದು ಒಳ್ಳೆಯದು.
ಜೀರಿಗೆಯಲ್ಲಿ ಪೊಟ್ಯಾಶಿಯಮ್, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಅಲ್ಲದೆ, ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
ಜೀರಿಗೆಯಲ್ಲಿ ಮೆಗ್ನೀಶಿಯಮ್, ಕ್ಯಾಲ್ಸಿಯಂ, ವಿಟಮಿನ್ ಎ, ಬಿ, ಸಿ ಗಳ ಸಮೃದ್ಧ ಶ್ರೇಣಿಯನ್ನು ಹೊಂದಿದೆ. ಹಾಗಾಗಿ ಋತುಸ್ರಾವದ ಸಮಯದಲ್ಲಿ ಕಾಣಿಸುವ ಹೊಟ್ಟೆ ನೋವಿಗೆ ಇದು ಉತ್ತಮವಾದ ಚಿಕಿತ್ಸೆ ನೀಡುತ್ತದೆ.
ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಅಜೀರ್ಣ, ಹೊಟ್ಟೆಯಲ್ಲಿ ಉಬ್ಬರ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ.
ನೀವು ಪ್ರತಿನಿತ್ಯ ನಿಯಮಿತವಾಗಿ ಜೀರಿಗೆ ಪಾನೀಯವನ್ನು ಕುಡಿಯುತ್ತಾ ಬಂದರೆ, ನಳನಳಿಸುವ ಚರ್ಮ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.