ಕೇರಳ ಶೈಲಿಯ ಬಾಯಲ್ಲಿ ನೀರೂರಿಸುವ ನೆಲ್ಲಿಕಾಯಿ ಉಪ್ಪಿನಕಾಯಿ

ಕೇರಳದ ಕಡೆ ಬೆಟ್ಟದ ನೆಲ್ಲಿಕಾಯಿಯನ್ನು ಬೇಯಿಸಿ ವಿಶೇಷವಾಗಿ ಉಪ್ಪಿನಕಾಯಿ ಮಾಡುತ್ತಾರೆ. ಇದೊಂದಿದ್ದರೆ ಅನ್ನದ ಜೊತೆ ತುಪ್ಪ ಕಲಸಿಕೊಂಡು ತಿಂದರೆ ಆಹಾ ಎನ್ನುವಂತಹ ರುಚಿ ಕೊಡುತ್ತದೆ. ಕೇರಳ ಶೈಲಿಯ ನೆಲ್ಲಿಕಾಯಿ ಉಪ್ಪಿನಕಾಯಿ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಮೊದಲಿಗೆ ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ನೀರು ಒರೆಸಿಕೊಳ್ಳಿ

ಈಗ ಒಂದು ಪಾತ್ರೆಗೆ ಸ್ವಲ್ಪ ಉಪ್ಪು, ಅರಿಶಿನ ಪುಡಿ ಹಾಕಿ ನೆಲ್ಲಿಕಾಯಿಯನ್ನು ಸೇರಿಸಿ ಬೇಯಿಸಿ

ಬೆಂದ ನೆಲ್ಲಿಕಾಯಿಯನ್ನು ಕತ್ತರಿಸಿ ಬೀಜ ಹೊರಗೆ ತೆಗೆಯಲು ಸುಲಭವಾಗುತ್ತದೆ

ಈಗ ಬಾಣಲೆಗೆ ಸ್ವಲ್ಪ ಎಣ್ಣೆ, ಜೀರಿಗೆ, ಸಾಸಿವೆ, ಕರಿಬೇವು, ಹಸಿಮೆಣಸು ಹಾಕಿ ಫ್ರೈ ಮಾಡಿ

ಈಗ ಇದಕ್ಕೆ ಸ್ವಲ್ಪ ಖಾರದ ಪುಡಿ, ಇಂಗು, ಕೊಂಚ ಅರಿಶಿನ ಹಾಕಿ ಚೆನ್ನಾಗಿ ಪ್ರೈ ಮಾಡಿ

ಇದು ಫ್ರೈ ಆದ ಬಳಿಕ ಒಂದು ಕಪ್ ನಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ

ಇದು ಕುದಿಯುತ್ತಿರುವಾಗ ನೆಲ್ಲಿಕಾಯಿ ಹೋಳು ಹಾಕಿ ಚೆನ್ನಾಗಿ ಕಲಸಿದರೆ ಉಪ್ಪಿನಕಾಯಿ ರೆಡಿ