ಸಿಂಪಲ್ ಆಗಿ ಖಾರ ದೋಸೆ ಮಾಡುವ ವಿಧಾನ

ಪ್ರತಿನಿತ್ಯ ಒಂದೇ ರೀತಿಯ ತಿಂಡಿಯಿಂದ ಬೇಸತ್ತಿದ್ದರೆ ಅದಕ್ಕೆ ಕೆಲವೊಂದು ಐಟಂಗಳನ್ನು ಸೇರಿಸಿ ಡಿಫರೆಂಟ್ ಆಗಿ ತಿಂಡಿ ಮಾಡಬಹುದು. ಅದರಲ್ಲಿ ಖಾರ ದೋಸೆಯೂ ಒಂದು. ನೀರು ದೋಸೆ ಹಿಟ್ಟಿಗೆ ಕೆಲವೇ ವಸ್ತುಗಳನ್ನು ಸೇರಿಸಿ ಖಾರ ದೋಸೆ ಮಾಡಿಕೊಳ್ಳುವುದು ಹೇಗೆ ಇಲ್ಲಿ ನೋಡಿ.

Photo Credit: Social Media

ದೋಸೆ ಅಕ್ಕಿ, ಧನಿಯಾ ಕಾಳು, ಕೆಂಪು ಮೆಣಸು, ಕರಿಬೇವು, ಚಿಕ್ಕ ತುಂಡು ಬೆಲ್ಲ ಇದ್ದರೆ ಖಾರ ದೋಸೆ ಮಾಡಬಹುದು

ಮೊದಲಿಗೆ ದೋಸೆ ಅಕ್ಕಿಯನ್ನು ಸುಮಾರು ನಾಲ್ಕರಿಂದ ಐದು ಗಂಟೆ ಕಾಲ ನೆನೆ ಹಾಕಿಡಿ

ನೆನೆಸಿದ ದೋಸೆ ಅಕ್ಕಿಯನ್ನು ಒಂದು ಮಿಕ್ಸ್ ಜಾರಿಗೆ ರುಬ್ಬಲು ಹಾಕಿ

ರುಬ್ಬುವಾಗ ಇದಕ್ಕೆ ಕೆಲವು ಕಾಳು ಧನಿಯಾ, ಎರಡು ಕೆಂಪು ಮೆಣಸು, ಬೆಲ್ಲ, ಕರಿಬೇವು ಹಾಕಿ ನುಣ್ಣಗೆ ರುಬ್ಬಿ

ಈ ದೋಸೆ ಹಿಟ್ಟು ನೀರು ದೋಸೆಯ ಹಿಟ್ಟಿನಂತೆಯೇ ತೆಳುವಾಗಿದ್ದರೆ ಉತ್ತಮ

ಒಂದು ತವಾ ತೆಗೆದುಕೊಂಡ ಅದಕ್ಕೆ ಎಣ್ಣೆ ಸವರಿ ಚೆನ್ನಾಗಿ ಬಿಸಿಯಾಗಲು ಬಿಡಿ

ಈಗ ಅದಕ್ಕೆ ನೀರು ದೋಸೆಯಂತೆ ರೆಡಿ ಮಾಡಿಕೊಂಡ ಹಿಟ್ಟನ್ನು ಎರಚಿದರೆ ಖಾರ ದೋಸೆ ಸವಿಯಲು ಸಿದ್ಧ.