ದೇವಾಲಯಗಳ ಆವರಣದಲ್ಲಿ ಸರ್ಪದ ಆಕಾರದಲ್ಲಿ ಹೂ ಬಿಡುವ ನಾಗಸಂಪಿಗೆ ವೃಕ್ಷವನ್ನು ನೋಡುತ್ತೀರಿ. ಇದರ ಹೂವು ಎಷ್ಟೊಂದು ಘಮಕೊಡುತ್ತದೆ ಎಂದರೆ ಸರ್ಪಗಳು ಇದರ ಪಕ್ಕ ಬೀಡುಬಿಡುತ್ತವಂತೆ. ನಾಗಸಂಪಿಗೆ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯುಕ್ತ ಎಂದು ಇಂದು ನೋಡೋಣ.
Photo credit: WD, Social Media
ಆಯುರ್ವೇದಲ್ಲಿ ಅನೇಕ ಔಷಧಿಗಳಲ್ಲಿ ನಾಗಸಂಪಿಗೆ ಪುಷ್ಪ ಅಥವಾ ನಾಗಕೇಸರಿಯನ್ನು ಬಳಸಲಾಗುತ್ತದೆ.
ನಾಗಸಂಪಿಗೆ ಪುಡಿಯೊಂದಿಗೆ ಜೇನು ತುಪ್ಪ ಮಿಶ್ರಣ ಮಾಡಿ ಸೇವಿಸಿದರೆ ಅಜೀರ್ಣ ದೂರವಾಗುತ್ತದೆ
ನಾಗಸಂಪಿಗೆ ಪುಡಿಯೊಂದಿಗೆ ಜೇನು ತುಪ್ಪ ಸೇರಿಸಿ ಸೇವಿಸಿದರೆ ಜ್ವರ ಸುಲಭವಾಗಿ ನಿವಾರಣೆಯಾಗುತ್ತದೆ
ನಾಗಸಂಪಿಗೆ ಪುಡಿ ಮತ್ತು ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಪೈಲ್ಸ್ ರಕ್ತಸ್ರಾವ ಗುಣವಾಗುತ್ತದೆ
ನಾಗಕೇಸರ ಪುಡಿಯೊಂದಿಗೆ ಜೇನು ತುಪ್ಪ ಸೇರಿಸಿ ಸೇವಿಸುವುದರಿಂದ ಅಸ್ತಮಾಕ್ಕೆ ಪರಿಹಾರ ಸಿಗುತ್ತದೆ
ಗಾಯಗಳಿಗೆ ನಾಗಕೇಸರಿ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಮಿಶ್ರ ಮಾಡಿ ಹಚ್ಚಿದರೆ ಬೇಗನೇ ವಾಸಿಯಾಗುತ್ತದೆ
ನೆನಪಿರಲಿ, ಯಾವುದೇ ಔಷಧಿ ಪ್ರಯೋಗ ಮಾಡುವ ಮೊದಲು ಆಯುರ್ವೇದ ತಜ್ಞರ ಸಲಹೆ ಪಡೆಯಿರಿ