ಪೋಷಕಾಂಶ ಭರಿತ ಆಹಾರ ಕೊರತೆ: ಕೇಶರಾಶಿ ಉದರಲು ಕಾರಣ

ಆರೋಗ್ಯವಂತ ಕೂದಲು ಅನುವಂಶೀಯವಾಗಿ ಲಭ್ಯವಾಗುತ್ತದೆ. ಕೆಲವೊಮ್ಮೆ ಗುಣಮಟ್ಟದ ಆಹಾರ ಹಾಗೂ ನಿಮ್ಮ ಕೂದಲಿನ ಆರೈಕೆಯನ್ನು ನೀವು ಹೇಗೆ ಮಾಡುವಿರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಕೆಲವರು ಜಂಕ್ ಫುಡ್​ ಅನ್ನು ಹೆಚ್ಚಾಗಿ ಸೇವಿಸುತ್ತಾರೆಯೇ ಹೊರತು ಪೋಷಕಾಂಶ ಭರಿತ ಆಹಾರಕ್ಕೆ ಆದ್ಯತೆ ನೀಡುವುದಿಲ್ಲ. ಈ ಅನಾರೋಗ್ಯಕರ ಆಹಾರ ಕ್ರಮ ಕೂಡ ದೇಹದ ಮೇಲೆ ಮಾತ್ರವಲ್ಲ ಕೂದಲಿನ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ.

photo credit social media

ಹಾಗಾಗಿ ನಿಮ್ಮ ಆಹಾರ ಕ್ರಮದಲ್ಲಿ ಸತ್ವಭರಿತ ಆಹಾರವನ್ನು ಸೇರಿಸಿ, ಸೇವಿಸಿ. ಇದರ ಸತ್ಪರಿಣಾಮ ನಿಮ್ಮ ಆರೋಗ್ಯದ ಜತೆ ಕೂದಲಿನ ಮೇಲೂ ಆಗದಿದ್ದರೆ ಹೇಳಿ. ಯಾವ ಆಹಾರ ನಿಮ್ಮ ಕೂದಲು ಶೀಘ್ರವಾಗಿ ಬೆಳೆಯಲು ಪೂರಕ ಎಂದು ನೋಡೋಣ ಬನ್ನಿ.

ನಿಮ್ಮ ಆಹಾರದಲ್ಲಿ ಸಾಕಷ್ಟು ನಟ್ಸ್‌ಗಳು ಇರುವಂತೆ ನೋಡಿಕೊಳ್ಳಿ. ವಾಲ್‌ನಟ್‌ ಹಾಗೂ ಬಾದಾಮಿ ಸಮೃದ್ಧ ಬಯೋಟಿನ್ ಹೊಂದಿದೆ. ಅದು ನಿಮ್ಮ ಕೂದಲಿನ ಕೋಶಗಳ ಕೋಶ ವಿಭಜನೆಗೆ ನೆರವಾಗುತ್ತದೆ. ಕೂದಲು ಉದ್ದ ಹಾಗೂ ಹೊಳಪು ಪಡೆಯುತ್ತದೆ. ವೈದ್ಯಕೀಯ ಪ್ರಯೋಗಗಳಲ್ಲಿ, ಬೆಕ್ಕುಗಳು ಹಾಗೂ ನಾಯಿಗಳು ಬಯೋಟಿನ್ ಚುಚ್ಚು ಮದ್ದು ಪಡೆದಾಗ ಉತ್ತಮ ಬೆಳವಣಿಗೆ ಸಾಧಿಸಿದ್ದು ಕಂಡುಬಂದಿದೆ.

ಸಿಹಿ ಆಲೂಗೆಡ್ಡೆ ಅಂದರೆ ಸಿಹಿ ಗೆಣಸಿನಲ್ಲಿರುವ ಸಮೃದ್ಧ ಬೀಟಾ - ಕ್ಯಾರೊಟಿನ್‌ ಕೂಡ ನಿಮ್ಮ ಕೂದಲಿಗೆ ಭಾರಿ ಉತ್ತಮ. ಅದು ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಇರಿಸುವುದಲ್ಲದೆ, ಸುಲಭವಾಗಿ ಒಡೆಯದಂತೆ ಹಾಗೂ ಒಣಗದಂತೆ ತಡೆಯುತ್ತದೆ. ಕೂದಲು ವೇಗವಾಗಿ, ಆರೋಗ್ಯಯುತವಾಗಿ ಬೆಳೆಯಲು ಸಹಕರಿಸುತ್ತದೆ.

ಮೊಟ್ಟೆಯ ಹಳದಿ ಲೋಳೆಯು ಅತಿ ಹೆಚ್ಚು ಬಯೋಟಿನ್, ಒಮೆಗಾ-3 ಹಾಗೂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಈ ಅಂಶಗಳು ನಮ್ಮ ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸುತ್ತದೆ, ಕೂದಲಿನ ಗುಣಮಟ್ಟ ಸುಧಾರಿಸುತ್ತದೆ ಹಾಗೂ ಕೋಶ ವಿಭಜನೆಯನ್ನು ಸುಧಾರಿಸುತ್ತದೆ. ಹಳದಿ ಮೆಣಸಿನಲ್ಲಿ ವಿಟಮಿನ್ ಸಿ ಹೆಚ್ಚಿದ್ದು, ಇದು ಉತ್ಕರ್ಷಣ ನಿರೋಧಕವಾಗಿದೆ. ಇದು ಕೂದಲಿನ ಫಾಲಿಕಲ್ ಹಾಗೂ ಶಾಫ್ಟ್ಗಳನ್ನು ಶಕ್ತಿಶಾಲಿಯಾಗಿ ಮಾಡಿ ಕೂದಲು ಒಡೆಯುವುದನ್ನು ತಡೆಯುತ್ತದೆ.

ಈ ಬೀಜಗಳಲ್ಲಿ ವಿಟಮಿನ್ ಇ ಅತ್ಯಧಿಕವಾಗಿದ್ದು, ನೆತ್ತಿ ಹಾಗೂ ಚರ್ಮದಲ್ಲಿ ಉತ್ತಮ ರಕ್ತ ಪರಿಚಲನೆ ಆಗುವಂತೆ ಮಾಡುತ್ತದೆ. ಅಲ್ಲದೆ ಇವು ನಮ್ಮ ಕೂದಲಿನ ಬೇರಿಗೆ ಮುಖ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಜತೆಗೆ ಕೂದಲಿನ ತ್ವರಿತ ಬೆಳವಣಿಗೆ ಹಾಗೂ ಆರೋಗ್ಯವಾಗಿ ಇರಲು ನೆರವಾಗುತ್ತದೆ.

ಉತ್ತಮ ಕೇಶಕ್ಕಾಗಿ ಅತಿ ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ಮಾಧ್ಯಮವೆಂದರೆ ಅದು ಮೀನು. ಇದರಲ್ಲಿ ಸಾರಭೂತ ಎಣ್ಣೆ, ವಿಟಮಿನ್ ಗಳು, ಖನಿಖಗಳು ಹಾಗೂ ಒಮೆಗಾ-3 ಕೊಬ್ಬಿನ ಆಮ್ಲ ಇರುತ್ತದೆ. ಈ ಅಂಶಗಳು ನಿಮ್ಮ ನೆತ್ತಿಯ ಆರೋಗ್ಯಕ್ಕೆ ಹಾಗೂ ಆರಂಭಿಕ ಕೋಶ ವಿಭಜನೆಗೆ ಪೂರಕವಾಗಿರುತ್ತದೆ. ಮೀನು ಸೇವನೆಯಿಂದ ಕೂದಲು ಬೇಗನೇ ಬೆಳೆಯಲು ಹಾಗೂ ಕೂದಲು ಉದುರದಂತೆ ತಡೆಯಲು ಸಾಧ್ಯವಾಗುತ್ತದೆ.

ನಮ್ಮ ದೇಹಕ್ಕೆ ಅವಶ್ಯಕವಾಗಿರುವ ಕೊಬ್ಬಿನ ಅಂಶಗಳನ್ನು ಯಥೇಚ್ಛವಾಗಿ ಹೊಂದಿರುವ ಅವಕಾಡೊ ಕೂದಲು ಉದುರುವುದನ್ನು ತಡೆಯುತ್ತದೆ. ಬೆಣ್ಣೆ ಹಣ್ಣನ್ನು ದಿನವೂ ತಿನ್ನುವುದರಿಂದ ನಿಮ್ಮ ನೆತ್ತಿ ಹಾಗೂ ಚರ್ಮದ ಪೋಷಣೆಯನ್ನು ನೀವು ಆರಾಮವಾಗಿ ಮಾಡಬಹುದು.