ಪೌಷ್ಟಿಕಾಂಶದ ಕೊರತೆ, ಜೀವನ ಶೈಲಿ ಬೆನ್ನು ನೋವಿಗೆ ಕಾರಣ

ನಾವು ದಿನನಿತ್ಯದ ಆರೋಗ್ಯದಲ್ಲಿ ಸುಧಾರಣೆ ಕಾಣಬೇಕು. ಬೆನ್ನಿಗೆ ಯಾವುದೇ ಒತ್ತಡ ಉಂಟಾಗಬಾರದು ಎಂದಾದರೆ ಮೊದಲು ಸೂಕ್ತ ವ್ಯಾಯಾಮದ ಆಯ್ಕೆ ಮಾಡಿ. ಮೂಳೆ, ತಜ್ಞರ ಸಲಹೆ ಮೇರೆಗೆ ಯಾವ ವ್ಯಾಯಾಮಗಳು ಬೆನ್ನು, ಸೊಂಟ ಹಾಗೂ ಕಾಲು ನೋವಿನ ಸಮಸ್ಯೆಯನ್ನು ನಿವಾರಿಸುತ್ತವೆ ಎನ್ನುವುದನ್ನು ಪರಿಶೀಲಿಸಿ. ನಂತರ ಆ ಕ್ರಮವನ್ನು ಅನುಸರಿಸಿ. ಬಹುಬೇಗ ಬೆನ್ನುನೋವಿನ ಸಮಸ್ಯೆಯಿಂದ ಮುಕ್ತರಾಗಬಹುದು.

photo credit social media

ವಯಸ್ಸು, ಆರೋಗ್ಯ ಸಮಸ್ಯೆ, ಪೌಷ್ಟಿಕಾಂಶದ ಕೊರತೆ ಹಾಗೂ ಕೆಲವು ಜೀವನ ಶೈಲಿಯಿಂದಾಗಿ ಬೆನ್ನು ನೋವು ಹಾಗೂ ಇನ್ನಿತರ ಮೂಳೆ ಸಂಬಂಧಿ ಆರೋಗ್ಯ ಸಮಸ್ಯೆ ಕಾಡುವುದು.

ಬೆನ್ನು ನೋವು ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಬೆನ್ನು ನೋವನ್ನು ವಿಶ್ವದಾದ್ಯಂತ ಕಾಡುವ ಒಂದು ಅಂಗವೈಕಲ್ಯ ಎಂದು ಹೇಳಲಾಗುವುದು. ಕೆಲವು ಅಂಕಿ ಅಂಶಗಳ ಪ್ರಕಾರ ಪ್ರತಿ 10 ಜನರಲ್ಲಿ 8 ಜನರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿತ್ಯವೂ ಕಾಡುವ ಈ ಅಸ್ವಸ್ಥತೆಗೆ ಕೆಲವು ಸರಳ ಪರಿಹಾರಗಳನ್ನು ಅನುಸರಿಸಬಹುದು.

ಬೆನ್ನು ನೋವು ಸಾಮಾನ್ಯ ಆರೋಗ್ಯ ಸಮಸ್ಯೆಯಲ್ಲಿ ಒಂದು. ಆದರೆ ಅದಕ್ಕೆ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ಯಾವ ಕಾರಣದಿಂದ ಬೆನ್ನು ನೋವು ಬುರುತ್ತಿದೆ? ಅದಕ್ಕೆ ಯಾವ ಆರೈಕೆ ಅಗತ್ಯ ಎನ್ನುವುದನ್ನು ಮೊದಲು ಪರಿಶೀಲಿಸಬೇಕು. ನಂತರ ನೋವಿಗೆ ಸೂಕ್ತ ಚಿಕಿತ್ಸೆ ಅಥವಾ ಆರೈಕೆಯನ್ನು ಪಡೆದುಕೊಳ್ಳಬೇಕು. ಕೆಲವೊಮ್ಮೆ ಚಿಕಿತ್ಸೆ ಫಲಕಾರಿಯಾಗದೆ ನೋವನ್ನು ಅನುಭವಿಸುತ್ತಲೇ ಇರಬೇಕಾಗುವುದು.

ಅಧಿಕ ತೂಕ ಹಾಗೂ ನಿರ್ಜಲೀಕರಣವು ಬೆನ್ನು ನೋವಿಗೆ ಹೆಚ್ಚಿನ ಒತ್ತಡ ನೀಡುತ್ತದೆ. ಉರಿಯೂತಕ್ಕೆ ಕಾರಣವಾಗುವ ಆಹಾರವನ್ನು ತ್ಯಜಿಸಬೇಕು. ಜೊತೆಗೆ ಸಾಕಷ್ಟು ನೀರನ್ನು ಕುಡಿಯಬೇಕು. ಅದು ಮೂಳೆಗಳ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು.

ಬೆರ್ರಿ ಹಣ್ಣು, ವಾಲ್‍ನಟ್, ಸೊಪ್ಪಿನಂತಹ ತರಕಾರಿಗಳು ಮೂಳೆಯ ಆರೋಗ್ಯವನ್ನು ಕಾಪಾಡುತ್ತವೆ. ಇವುಗಳ ಜೊತೆಗೆ ನೀರನ್ನು ಹೆಚ್ಚಾಗಿ ಸೇವಿಸಬೇಕು. ಪ್ರತಿ ದಿನ ಮಹಿಳೆಯರು 2.7 ಲೀ ನಷ್ಟು ಮತ್ತು ಪುರುಷರು 3.7 ಲೀ. ನಷ್ಟು ನೀರನ್ನು ಕುಡಿಯಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಧೂಮ ಪಾನ ಬೆನ್ನು ನೋವನ್ನು ತೀವ್ರಗೊಳಿಸುತ್ತದೆ. ಬೆನ್ನು ನೋವು ಇರುವವರು ಧೂಮ ಪಾನ ಮಾಡದಿರಿ. ಗಾಯಗೊಂಡ ಪ್ರದೇಶಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುವುದು. ಹೃದಯ ರೋಗ ಮತ್ತು ಉಸಿರಾಟದ ತೊಂದರೆಯನ್ನು ದ್ವಿಗುಣಗೊಳ್ಳುತ್ತದೆ. ಮೂಳೆಗಳ ಆರೋಗ್ಯವನ್ನು ಹಾಳು ಮಾಡುವುದು.

ಅಧಿಕ ಮಾನಸಿಕ ಒತ್ತಡವು ಮೂಳೆಯ ಆರೋಗ್ಯವನ್ನು ಹಾಳು ಮಾಡುತ್ತದೆ. ಮಾನಸಿಕವಾಗಿ ಶಾಂತವಾಗಿದ್ದರೆ ನರ ಮಂಡಲಗಳು ಶಾಂತಗೊಳ್ಳುತ್ತವೆ. ಧ್ಯಾನ, ಯೋಗ ಮತ್ತು ಉಸಿರಾಟದ ವ್ಯಾಯಾಮಗಳನ್ನು ಕೈಗೊಂಡಾಗ ಮಾನಸಿಕ ಮತ್ತು ದೈಹಿಕ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ.