8 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಅಪಾಯಗಳೇನು

ಒಬ್ಬ ವ್ಯಕ್ತಿ ಆರೋಗ್ಯವಂತನಾಗಿರಬೇಕು ಎಂದರೆ ಆತ ದಿನಕ್ಕೆ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಅದಕ್ಕಿಂತ ಕಡಿಮೆ ನಿದ್ರೆ ಮಾಡುವುದರಿಂದ ನಮಗೆ ಬರಬಹುದಾದ ಆರೋಗ್ಯ ಸಮಸ್ಯೆಗಳೇನೇನು ನೋಡಿ.

credit: social media

7 ಅಥವಾ 8 ಗಂಟೆ ಅರೆಬರೆ ಅಲ್ಲದ ಸುಖವಾದ ನಿದ್ರೆ ಮಾಡದೇ ಹೋದರೆ ಆರೋಗ್ಯ ಸಮಸ್ಯೆಯಾಗಬಹುದು

ದಿನಕ್ಕೆ 7 ಗಂಟೆಗಿಂತಲೂ ಕಡಿಮೆ ನಿದ್ರೆ ಮಾಡುವ ಅಭ್ಯಾಸವಿದ್ದರೆ ಅಂತಹವರಿಗೆ ಕ್ಯಾನ್ಸರ್ ಅಪಾಯವಿದೆ

ಕಡಿಮೆ ನಿದ್ರೆ ಮಾಡುವುದರಿಂದ ನಿಮ್ಮ ಜ್ಞಾಪಕ ಶಕ್ತಿ, ಏಕಾಗ್ರತೆ, ಭಾವನಾತ್ಮಕ ಸಮತೋಲನ ತಪ್ಪಬಹುದು

ದಿನಕ್ಕೆ 5 ಗಂಟೆಗಿಂತಲೂ ಕಡಿಮೆ ನಿದ್ರಿಸುವುದರಿಂದ ನಿಮ್ಮ ಕಲಿಕಾ ಮಟ್ಟ ಮೇಲೆ ಪರಿಣಾಮ ಬೀರಬಹುದು

ದಿನಕ್ಕೆ 7 ಗಂಟೆಗಿಂತಲೂ ಕಡಿಮೆ ನಿದ್ರಿಸುವುದರಿಂದ ಬೊಜ್ಜು, ತೂಕ ಹೆಚ್ಚಳ ಸಮಸ್ಯೆ ಕಂಡುಬರಬಹುದು

ಆರೋಗ್ಯಕರ ಅವಧಿ ನಿದ್ರೆ ಮಾಡದೇ ಹೋದರೆ ಖಿನ್ನತೆಯಂತಹ ಮಾನಸಿಕ ಸಮಸ್ಯೆಯಾಗಬಹುದು

ಸುದೀರ್ಘ ಅವಧಿವರೆಗೆ ಸರಿಯಾಗಿ ನಿದ್ರೆ ಮಾಡದೇ ಹೋದರೆ ಹೃದಯ ಸಂಬಂಧೀ ಆರೋಗ್ಯ ಸಮಸ್ಯೆಯಾಗಬಹುದು