ಖಾಲಿಹೊಟ್ಟೆಯಲ್ಲಿ ನೆಲ್ಲಿಕಾಯಿ ಪೌಡರ್ ನೀರು ಕುಡಿಯುವುದರ ಲಾಭಗಳು

ಪ್ರತಿನಿತ್ಯ ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ನೆಲ್ಲಿಕಾಯಿ ಪೌಡರ್ ಹಾಕಿದ ನೀರನ್ನು ಸೇವನೆ ಮಾಡಿ. ಇದರಿಂದ ಎಷ್ಟೆಲ್ಲಾ ಆರೋಗ್ಯಕರ ಉಪಯೋಗಗಳಿವೆ ಎಂಬುದನ್ನು ನೋಡಿ.

Photo Credit: Instagram, Facebook

ನೆಲ್ಲಿಕಾಯಿ ಕಟ್ ಮಾಡಿ ಬಿಸಿಲಿಗೆ ಒಣಗಿಸಿ ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ

ಒಂದು ಲೋಟ ಹದ ಬಿಸಿನೀರಿಗೆ ಒಂದು ಸ್ಪೂನ್ ನೆಲ್ಲಿಕಾಯಿ ಪೌಡರ್ ಹಾಕಿ ಸೇವಿಸಿ

ಮಲಬದ್ಧತೆ ಇರುವವರು ಖಾಲಿಹೊಟ್ಟೆಯಲ್ಲಿ ನೆಲ್ಲಿಕಾಯಿ ನೀರು ಸೇವನೆ ಮಾಡಿದರೆ ಉತ್ತಮ

ನೆಲ್ಲಿಕಾಯಿ ಪೌಡರ್ ಹಾಕಿದ ನೀರು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ನೆಲ್ಲಿಕಾಯಿ ಪೌಡರ್ ಹಾಕಿದ ನೀರು ಸೇವನೆ ಮಾಡಿ

ಮಧುಮೇಹಿಗಳು ಪ್ರತಿನಿತ್ಯ ಈ ನೀರನ್ನು ಸೇವಿಸುತ್ತಿದ್ದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ನೀರು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗಿ ನಡೆಯುತ್ತದೆ