ಸೂಪರ್ ಟೇಸ್ಟೀ ಮಂಗಳೂರು ಸ್ಟೈಲ್ ಬಂಗುಡೆ ತವಾ ಫ್ರೈ

ಮೀನಿನ ಖಾದ್ಯಗಳಿಗೆ ಕರಾವಳಿ ನಗರಿ ಮಂಗಳೂರು ಫೇಮಸ್. ಅದರಲ್ಲೂ ಮಂಗಳೂರಿನಲ್ಲಿ ಸಿಗುವ ಬಂಗುಡೆ ಫ್ರೈ ರುಚಿ ಅದ್ಭುತ. ಇದನ್ನು ಸುಲಭವಾಗಿ ಮಾಡಲು ಇಲ್ಲಿದೆ ಟಿಪ್ಸ್.

Photo Credit: Instagram

ಮೊದಲು ಮೀನನ್ನು ಸ್ವಚ್ಛಗೊಳಿಸಿ ಗೀರು ಮಾಡಿಟ್ಟುಕೊಳ್ಳಿ

ಒಂದು ಬೌಲ್ ನಲ್ಲಿ ಖಾರದ ಪುಡಿ, ಅರಿಶಿನ ಪುಡಿ ತೆಂಗಿನ ಎಣ್ಣೆ ಹಾಕಿ

ಇದಕ್ಕೆ ಧನಿಯಾ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿಕೊಳ್ಳಿ

ಇದಕ್ಕೆ ಸ್ವಲ್ಪ ನಿಂಬೆ ರಸ ಹಾಕಿಕೊಂಡು ಚೆನ್ನಾಗಿ ಕಲಸಿ ಪೇಸ್ಟ್ ಮಾಡಿ

ಈ ಪೇಸ್ಟ್ ನ್ನು ಭಾಗ ಮಾಡಿರುವ ಮೀನಿಗೆ ಚೆನ್ನಾಗಿ ಹಚ್ಚಿಕೊಳ್ಳಿ

ತವಾಗೆ ತೆಂಗಿನ ಎಣ್ಣೆ ಹಾಕಿ ಮೀನನ್ನು ಎರಡೂ ಬದಿ ಬೇಯಿಸಿಕೊಳ್ಳಿ

ಈಗ ರುಚಿ ರುಚಿಯಾದ ಬಂಗುಡೆ ಮೀನಿನ ಫ್ರೈ ಸವಿಯಲು ಸಿದ್ಧ