ಮೆಂತ್ಯ ಸೊಪ್ಪಿನ ರೊಟ್ಟಿ ಮಾಡುವ ವಿಧಾನ

ಅನೇಕ ಆರೋಗ್ಯಕರ ಪ್ರಯೋಜನ ಹೊಂದಿರುವ ಮೆಂತ್ಯ ಸೊಪ್ಪು ಬಳಸಿ ರೊಟ್ಟಿ ಮಾಡುವುದು ಹೇಗೆ ಎಂದು ನೋಡೋಣ. ಇದಕ್ಕೆ ಬೇಕಾಗಿರುವುದು ಮೆಂತ್ಯ ಸೊಪ್ಪು, ಅಕ್ಕಿ ಹಿಟ್ಟು, ಜೀರಿಗೆ, ಕಾಯಿತುರಿ, ಹಸಿಮೆಣಸು, ಉಪ್ಪು ಮತ್ತು ಎಣ್ಣೆ

Photo Credit: Social Media

ಮೊದಲು ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿಕಾಯಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಿ

ಈ ಮಿಶ್ರಣಕ್ಕೆ ಸ್ವಲ್ಪ ಜೀರಿಗೆ, ಕಾಯಿತುರಿ, ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ

ಇದನ್ನು ರೊಟ್ಟಿ ಹಿಟ್ಟಿನ ಹದಬರುವಷ್ಟು ನೀರು ಹಾಕುತ್ತಾ ಚೆನ್ನಾಗಿ ಕಲಸಿಟ್ಟುಕೊಳ್ಳಿ

ಒಂದು ತವಾ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಬಿಸಿಯಾಗಲು ಬಿಡಿ

ಒಂದು ಬಾಳೆ ಎಲೆ ಅಥವಾ ರೋಟಿ ಶೀಟ್ ನಲ್ಲಿ ರೊಟ್ಟಿ ತಟ್ಟಿ ತವಾದಲ್ಲಿ ಬೇಯಿಸಿ

ಇದನ್ನು ಎರಡೂ ಕಡೆ ಮಗುಚಿ ಮುಚ್ಚಳ ಮುಚ್ಚದೇ ಎಣ್ಣೆ ಹಾಕಿ ಬೇಯಿಸಿಕೊಳ್ಳಿ

ಈಗ ರುಚಿಕರ ಮೆಂತ್ಯ ಸೊಪ್ಪಿನ ರೊಟ್ಟಿಯನ್ನು ತುಪ್ಪ, ಚಟ್ನಿ ಹಾಕಿಕೊಂಡು ಸವಿಯಬಹುದು