ಬಂಜೆತನದ ಸಮಸ್ಯೆ ದೂರ ಮಾಡುತ್ತೆ ಇಂತಹ ಅದ್ಭುತ ಆಹಾರಗಳು

ಮಕ್ಕಳಾಗದಿದ್ದರೆ ಮಹಿಳೆಯ ಮೇಲೆ ತಪ್ಪು ಹೊರಿಸುವುದು ಸರಿಯಲ್ಲ. ಪುರುಷರು ಕೂಡ ಈ ಸಮಸ್ಯೆಗೆ ನೇರ ಹೊಣೆಯಾಗಿ ರುತ್ತಾರೆ. ಇಂದಿನ ಲೇಖನದಲ್ಲಿ ಪುರುಷರು ಹಾಗೂ ಮಹಿಳೆಯರಲ್ಲಿ ಮಕ್ಕಳಾಗದಿರುವ ಸಮಸ್ಯೆಯನ್ನು ದೂರ ಮಾಡುವ ಆಹಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ ಮುಂದೆ ಓದಿ.

photo credit social media

ಬಂಜೆತನ ಅಥವಾ ಮಕ್ಕಳಾಗದಿರುವ ಸಮಸ್ಯೆ ಎನ್ನುವುದು ಕೇವಲ ಮಹಿಳೆಯರಲ್ಲಿ ಮಾತ್ರ ಕಾಡುವ ಸಮಸ್ಯೆ. ಮದುವೆಯಾಗಿ ಒಂದೆರಡು ವರ್ಷ ಕಳೆದರೂ ಕೂಡ ಮಗು ಆಗದೆ ಇರಲು ಆಕೆಯೇ ಕಾರಣ ಎಂದು ಹೇಳುವಂತಹ ದಿನಗಳಿದ್ದವು! ಆದರೆ ಕಾಲ ಬದಲಾಗಿಬಿಟ್ಟಿದೆ, ಇಂತಹ ಕಟ್ಟು ಕಥೆಗಳಿಗೆ, ವೈದ್ಯ ಲೋಕವೇ ಸಾಕ್ಷಿ ಸಮೇತ ಉತ್ತರವನ್ನು ನೀಡುತ್ತಿದ್ದೆ. ಬಂಜೆತನ ಎನ್ನುವುದು ಕೇವಲ ಮಹಿಳೆಯರಿಗೆ ಮಾತ್ರ ಕಾಡುವ ಸಮಸ್ಯೆಯಲ್ಲ, ಪುರುಷರಲ್ಲೂ ಕೂಡ ಈ ಸಮಸ್ಯೆ ಕಂಡು ಬರುತ್ತದೆ.

ಪ್ರಮುಖವಾಗಿ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಪ್ರಮಾಣ ಕಡಿಮೆ ಇದ್ದರೆ ಅಥವಾ ಟೆಸ್ಟೋಸ್ಟೆರಾನ್ ರಸದೂತದ ಕೊರತೆ ಕಂಡು ಬರುವುದೇ ಈ ಸಮಸ್ಯೆಗೆ ಕಾರಣ ಎಂದು ಸಾಬೀತಾಗಿದೆ. ಇದರ ಜೊತೆಗೆ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಹಾಗೂ ಕೆಲವೊಮ್ಮೆ ಅನುವಂಶೀಯ ಕಾರಣದಿಂದ ಕೂಡ, ಈ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆಯಂತೆ!

ಈ ಸಮಸ್ಯೆಯನ್ನು ಹೋಗಲಾಡಿಸಲು, ಆರೋಗ್ಯಕಾರಿ ಜೀವನ ಶೈಲಿಯ ಜೊತೆಗೆ, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ, ತಕ್ಕ ಮಟ್ಟಿಗಾದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ

ಬೆಳ್ಳುಳ್ಳಿಯಲ್ಲಿ ಇರುವಂತಹ ಆರೋಗ್ಯ ಲಾಭಗಳ ಬಗ್ಗೆ ಹೆಚ್ಚಿನ ವರಿಗೆ ಗೊತ್ತೇ ಇದೆ. ಇದು ಕೇವಲ ಆರೋಗ್ಯಕಾರಿ ಮಾತ್ರವಲ್ಲದೆ, ಹಲವಾರು ರೀತಿಯ ಔಷಧೀಯ ಗುಣಗಳನ್ನು ಕೂಡ ಹೊಂ ದಿದೆ.

ಲೈಂಗಿಕ ಸಮಸ್ಯೆಯಂತಹ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವಲ್ಲಿ ನೆರವಿಗೆ ಬರುತ್ತದೆ. ಹೀಗಾಗಿ ಅಡುಗೆಯಲ್ಲಿ ಮಿತ ವಾಗಿ ಬೆಳ್ಳುಳ್ಳಿಯನ್ನು ಬಳಸುವ ಅಭ್ಯಾಸ ಇಟ್ಟು ಕೊಂಡರೆ ಒಳ್ಳೆಯದು.

ಬಾದಾಮಿ, ದ್ರಾಕ್ಷಿ, ಗೋಡಂಬಿ, ವಾಲ್ ನಟ್ಸ್, ಒಣಖರ್ಜೂರ, ಇವುಗಳೆಲ್ಲಾ ಆರೋಗ್ಯ ವೃದ್ಧಿಸುವ ಒಳ್ಳೆಯ ಡ್ರೈ ಫ್ರೂಟ್ಸ್ ಗಳು.ಇಂತಹ ​ಡ್ರೈ ಫ್ರೂಟ್ಸ್ ಗಳಲ್ಲಿ ಸಿಗುವ ಹಲವು ಬಗೆಯ ವಿಟಮಿನ್ಸ್ ಅಂಶಗಳು, ಖನಿಜಾಂಶಗಳು ಮತ್ತು ಇನ್ನಿತರ ಪೌಷ್ಟಿಕ ಸತ್ವಗಳು ಮನುಷ್ಯನ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ, ಹಲವು ಬಗೆಯ ಆರೋಗ್ಯ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತವೆ!

ಹಣ್ಣು-ತರ ಕಾರಿಗಳನ್ನು ಸೇವನೆ ಮಾಡುವುದು, ಹಾಲು ಹಾಗೂ ಡೈರಿ ಪದಾ ರ್ಥಗಳನ್ನು ತಮ್ಮ ಆಹಾರಪದ್ಧತಿಯಲ್ಲಿ ಸೇರಿಸಿಕೊಳ್ಳುವುದು, ಮಾಂಸಾಹಾರಿಗಳಾಗಿದ್ದರೆ ಮಿತವಾಗಿ ಮೀನು ಸೇವನೆ ಮಾಡು ವುದು ಇತ್ಯಾದಿ ಆರೋಗ್ಯಕಾರಿ ಜೀವನ ಶೈಲಿಯನ್ನು ಅನುಸರಿಸ ಬೇಕು.