ದೇಹದಲ್ಲಿ ಶುದ್ದ ರಕ್ತ ಪಡೆಯಲು ಹಣ್ಣುಗಳನ್ನು ಸೇವಿಸಿ

ನಮಗೆಲ್ಲಾ ಗೊತ್ತೇ ಇರುವ ಹಾಗೆ, ನಮ್ಮದೇಹದಲ್ಲಿ ಹರಿಯುವ ರಕ್ತ ನಮ್ಮ ಜೀವದ್ರವವಾಗಿದ್ದು ಇದಕ್ಕೆ ಬೆಲೆ ಕಟ್ಟುವುದು ಆಗಲಿ, ಅಥವಾ ಪರ್ಯಾಯ ಒದಗಿಸುವುದಾಗಲಿ ಸಾಧ್ಯವಿಲ್ಲದ ಮಾತು. ಹಾಗಾಗಿ ರಕ್ತದ ಅರೋಗ್ಯ ಚೆನ್ನಾಗಿ ಇರಬೇಕೆಂದರೆ ಹಸಿರೆಲೆ ತರಕಾರಿಗಳು, ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.

photo credit social media

ನಮ್ಮ ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸ ಬೇಕೆಂದರೆ, ದೇಹದಲ್ಲಿ ನರನಾಡಿ ಗಳಲ್ಲಿ ಹರಿಯುವ ರಕ್ತ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮುಖ್ಯವಾಗಿ ನಾವು ಪ್ರತಿದಿನ ಸೇವನೆ ಮಾಡುವ ಆಹಾರದಲ್ಲಿ ಸಿಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳನ್ನು ನಮ್ಮ ಎಲ್ಲಾ ಅಂಗಾಂಗ ಗಳಿಗೆ ತಲುಪುವಂತೆ ಮಾಡುವ ಕೆಲಸವನ್ನು, ನಮ್ಮ ದೇಹದ ರಕ್ತ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.

ದೇಹದ ಯಾವುದೇ ಭಾಗಕ್ಕೆ ಪೌಷ್ಟಿಕಾಂಶಗಳಿಗೆ ಕೊರತೆಯಾಗದಂತೆ ಇದು ನೋಡಿ ಕೊಳ್ಳುತ್ತದೆ. ಹೀಗಾಗಿ ನಮ್ಮ ಆರೋಗ್ಯದ ಜೀವನಾಡಿ ಆಗಿರುವ ರಕ್ತದಲ್ಲಿ ಕಲ್ಮಶಗಳು ಸೇರದಂತೆ, ಎಚ್ಚರವಹಿಸಿ ಕೊಳ್ಳುವುದರ ಜೊತೆಗೆ, ರಕ್ತವನ್ನು ಪರಿಶುದ್ಧ ರೂಪದಲ್ಲಿ ಇರಿಸಿಕೊಳ್ಳಬೇಕು.

ಹಸಿರು ತರಕಾರಿಗಳು ಹಾಗೂ ಹಸಿರೆಲೆ ತರಕಾರಿಗಳ ಬಗ್ಗೆ ನಮಗೆ ಗೊತ್ತೇ ಇದೆ. ತಮ್ಮಲ್ಲಿ ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿರುವ ಇಂತಹ ತರಕಾರಿಗಳು ಆರೋಗ್ಯವನ್ನು ವೃದ್ಧಿಸುವುದು ಮಾತ್ರ ವಲ್ಲದೆ, ಹಲವಾರು ಆರೋಗ್ಯ ಸಮಸ್ಯೆಗಳಿಂದ ಕೂಡ ನಮ್ಮನ್ನು ದೂರವಿರಿಸುತ್ತದೆ.

ಬ್ರೊಕೋಲಿ ಅಥವಾ ಕೋಸುಗಡ್ಡೆ, ಕ್ಯಾರೆಟ್, ಬೀಟ್ರೋಟ್, ಹೂಕೋಸು, ಪಾಲಕ್ ಸೊಪ್ಪು, ಮೆಂತೆ ಸೊಪ್ಪು ಇತ್ಯಾದಿಗಳು, ತಮ್ಮಲ್ಲಿ ಅಧಿಕ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಹೊಂದಿರುವ ಜೊತೆಗೆ, ಆಂಟಿಆಕ್ಸಿಡೆಂಟ್‌ ಗುಣ ಲಕ್ಷಣಗಳನ್ನು ಕೂಡ ಒಳಗೊಂಡಿದೆ.

ಹಣ್ಣುಗಳಲ್ಲಿ ಸಿಗುವ ಆರೋಗ್ಯಕಾರಿ ಪ್ರಯೋಜನಗಳು ನಮಗೆಲ್ಲಾ ಗೊತ್ತೇ ಇದೆ. ಪ್ರತಿದಿನ ನೀರಿ ನಾಂಶ ಹೆಚ್ಚಿರುವ ಹಣ್ಣುಗಳನ್ನು ಸೇವನೆ ಮಾಡುವುದರಿಂದ, ದೇಹದಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡಿ, ಆರೋಗ್ಯ ವೃದ್ಧಿಯಾಗುವಂತೆ ಮಾಡುತ್ತದೆ.

ದಾಳಿಂಬೆ ಹಣ್ಣು, ಅನಾನಸ್ ಹಣ್ಣು, ಕಿವಿ ಹಣ್ಣು, ಸೇಬು, ಕಲ್ಲಂಗಡಿ ಹಣ್ಣು, ಮೂಸಂಬಿ, ಕಿತ್ತಳೆ ಹಣ್ಣು, ಪರಂಗಿ ಹಣ್ಣು, ಬೆರ್ರಿ ಹಣ್ಣು ಇತ್ಯಾದಿಗಳು. ಆದಷ್ಟು ಇಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ, ರಕ್ತದಲ್ಲಿರುವ ಕಲುಷಿತ ವಿಷಕಾರಿ ಅಂಶಗಳು ದೂರ ವಾಗುತ್ತದೆ.

ವೈದ್ಯರು ಹೇಳುವ ಹಾಗೆ ಒಬ್ಬ ಮನುಷ್ಯ ಆರೋಗ್ಯವಾಗಿ ಜೀವನ ನಡೆಸಬೇಕು ಎಂದರೆ, ಆರೋಗ್ಯ ಕಾರಿ ಆಹಾರ ಪದ್ಧತಿ, ಸರಿಯಾದ ಜೀವನಶೈಲಿಯ ಜೊತೆಗೆ ಪ್ರತಿದಿನ ಕನಿಷ್ಟ ಪಕ್ಷ ಎಂದರೂ ಕೂಡ ಎರಡು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕೆಂತೆ!