ಗ್ಯಾಸ್ಟ್ರಿಕ್ ಸಮಸ್ಯೆಗೆ ನೈಸರ್ಗಿಕ ಪರಿಹಾರ

ಇಂದಿನ ದಿನ ಹೆಚ್ಚಿನ ಮಂದಿ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಾರೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ನೀಡಲು ನಾವು ನೈಸರ್ಗಿಕವಾಗಿ ಏನೆಲ್ಲಾ ಮಾಡಬಹುದು ಎಂಬುದನ್ನು ಇಲ್ಲಿ ತಿಳಿಯೋಣ.

credit: social media

ನಾವು ದಿನನಿತ್ಯ ಸೇವಿಸುವ ಆಹಾರಗಳು ಮತ್ತು ಜೀವನಶೈಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ.

ದಿನಕ್ಕೆ ಕನಿಷ್ಠ ಪಕ್ಷ ಮೂರು ಹೊತ್ತಾದರೂ ಸರಿಯಾಗಿ ಹೊಟ್ಟೆ ತುಂಬುವಷ್ಟು ಆಹಾರ ಸೇವಿಸಬೇಕು

ಮಕ್ಕಳಿಗೆ ಹೇಳುವಂತೆ ನಾವೂ ದೊಡ್ಡವರಾದ ಮೇಲೂ ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದು ಮುಖ್ಯ

ಜೀರ್ಣಕ್ರಿಯೆ ಸರಿಯಾಗಿ ಆಗಬೇಕಾದರೆ ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು

ದೊಡ್ಡ ಕರುಳಿನಲ್ಲಿ ಆಹಾರದ ಚಲನೆ ವೇಗಗೊಳಿಸಲು ಫೈಬರ್ ಅಂಶವಿರುವ ಆಹಾರ ಸೇವಿಸಿ

ಕೂತಲ್ಲೇ ಕೂರುವ ಬದಲು ವಾಕಿಂಗ್, ಜಾಗಿಂಗ್ ಇತ್ಯಾದಿ ದೈಹಿಕ ವ್ಯಾಯಾಮ ಮಾಡಿದರೆ ಉತ್ತಮ

ಆಹಾರ ಎಷ್ಟೇ ಪ್ರಮಾಣದಲ್ಲಿ ಸೇವಿಸುವುದಿದ್ದರೂ ಸರಿಯಾದ ಹೊತ್ತಿಗೆ ಸೇವನೆ ಮಾಡುವುದು ಮುಖ್ಯ.