ಆರೆಂಜ್ ಸಿಪ್ಪೆಯನ್ನು ಹೀಗೆಲ್ಲಾ ಬಳಸಬಹುದು

ಆರೆಂಜ್ ಅಥವಾ ಕಿತ್ತಳೆ ಹಣ್ಣನ್ನು ತಿಂದ ಮೇಲೆ ಅದರ ಸಿಪ್ಪೆಯನ್ನು ಬಿಸಾಕಬೇಡಿ. ಅದನ್ನು ಬೇರೆ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬಹುದು. ಹೇಗೆ ಇಲ್ಲಿ ನೋಡಿ.

Photo Credit: Instagram

ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಸಾಕಷ್ಟು ವಿಟಮಿನ್ ಸಿ, ಎ, ಇ ಮತ್ತು ಫೈಬರ್ ಅಂಶವಿದೆ

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಂಡು ಗೊಜ್ಜು ಮಾಡಬಹುದು

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದರಿಂದ ಫೇಸ್ ಪ್ಯಾಕ್ ಮಾಡಿ ಹಚ್ಚಬಹುದು

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹಾಕಿ ಮಸಾಜ್ ಮಾಡುವುದರಿಂದ ಮೊಡವೆ ಹೋಗುವುದು

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಕುದಿಯುವ ನೀರಿಗೆ ಹಾಕಿ ಕುಡಿದರೆ ಜೀರ್ಣಕ್ರಿಯೆ ಸಮಸ್ಯೆ ದೂರವಾಗುವುದು

ಕಾಲಿನ ಹಿಮ್ಮಡಿ ಒಡೆದಿದ್ದರೆ ಕಿತ್ತಳೆ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಉಜ್ಜಿಕೊಳ್ಳಿ

ಆರೆಂಜ್ ಸಿಪ್ಪೆಯ ಪುಡಿಯಿಂದ ಹಲ್ಲು ಉಜ್ಜಿದರೆ ಹಲ್ಲಿನ ಹಳದಿಗಟ್ಟುವಿಕೆ ದೂರವಾಗುವುದು