ಪೆಪ್ಪರ್ ಮಸಾಲ ರೈಸ್ ಬಾತ್ ರೆಸಿಪಿ

ಪೆಪ್ಪರ್ ಅಥವಾ ಕಾಳುಮೆಣಸು ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದ್ದು, ಇದನ್ನು ಅಡುಗೆಯಲ್ಲಿ ಹೇರಳವಾಗಿ ಬಳಸುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇಂದು ಪೆಪ್ಪರ್ ಉಪಯೋಗಿಸಿ ಮಾಡುವ ರೈಸ್ ಬಾತ್ ರೆಸಿಪಿ ತಿಳಿದುಕೊಳ್ಳೋಣ.

Photo Credit: Social Media

ಕಾಳುಮೆಣಸು, ಪುಲಾವ್ ಅಕ್ಕಿ, ಬಟಾಣಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುಲಾವ್ ಮಸಾಲಗಳು, ಎಣ್ಣೆ ಬೇಕು

ಹಸಿಮೆಣಸು, ಬೆಳ್ಳುಳ್ಳಿ, ಕಾಳುಮೆಣಸು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ, ಚಕ್ಕೆ, ಲವಂಗ ಹಾಕಿ ರುಬ್ಬಿಕೊಳ್ಳಿ

ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ, ಚಕ್ಕೆ, ಲವಂಗ, ಏಲಕ್ಕಿ, ಬಳಿಕ ಬಟಾಣಿ ಹಾಕಿ ಚೆನ್ನಾಗಿ ಫ್ರೈ ಮಾಡಿ

ಇದಕ್ಕೆ ಅಚ್ಚ ಖಾರದ ಪುಡಿ ಬದಲು ಕಾಳುಮೆಣಸಿನ ಪುಡಿ ಮಾಡಿ ಹಾಕಿಕೊಂಡು ಫ್ರೈ ಮಾಡಿ

ಈ ಮಿಶ್ರಣಕ್ಕೆ ಪುಲಾವ್ ಅಕ್ಕಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಇದರಿಂದ ಅನ್ನ ಉದುರು ಉದುರಾಗಿರುತ್ತದೆ

ಈಗ ಪುಲಾವ್ ಮಾಡಲು ಬಳಸುವಂತೆ ನೀರು ಮತ್ತು ಉಪ್ಪು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ

ಈಗ ಬಿಸಿ ಬಿಸಿಯಾದ ಪೆಪ್ಪರ್ ಮಸಾಲ ಪುಲಾವ್ ಬಿಸಿ ಬಿಸಿಯಾಗಿರುವಾಗಲೇ ತಿನ್ನಿ