ಟೀನೇಜ್ ಬಂದಾಕ್ಷಣ ಮುಖದಲ್ಲಿ ಮೊಡವೆಗಳು ಬೀಳುವ ಚಿಂತೆ ಶುರುವಾಗುತ್ತದೆ. ಮೊಡವೆ ಬಾರದಂತೆ ತಡೆಯಲು ಮತ್ತು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ನಾವು ಮನೆಯಲ್ಲಿಯೇ ಮಾಡಬಹುದಾದ ಪರಿಹಾರಗಳೇನು ನೋಡೋಣ.
credit: social media
ಜೇನು ತುಪ್ಪಕ್ಕೆ ಮೊಸರು ಸೇರಿಸಿ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಳ್ಳಿ.
ಬೆಳಿಗ್ಗೆ ಎದ್ದ ತಕ್ಷಣ ಕೆಫೈನ್ ಅಂಶವಿರುವ ಕಾಫಿ ಅಥವಾ ಚಹಾ ಕುಡಿಯುವುದನ್ನು ಬಿಡಿ
ಕಾಫಿ ಅಥವಾ ಚಹಾಗಿಂತ ಗ್ರೀನ್ ಟೀ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಮೊಡವೆ ಕಾಣಿಸಿಕೊಂಡ ತಕ್ಷಣ ಅಲ್ಯುವೀರಾ ಜೆಲ್ ನ್ನು ನಿಯಮಿತವಾಗಿ ಹೆಚ್ಚಿ ಮಸಾಜ್ ಮಾಡಿ.
ಆಹಾರದಲ್ಲಿ ಸಕ್ಕರೆ, ಅತಿಯಾದ ಜಿಡ್ಡಿನ ಪದಾರ್ಥ, ಜಂಕ್ ಫುಡ್ ಸೇವಿಸುವುದನ್ನು ಕಡಿಮೆ ಮಾಡಿ.
ಮಾನಸಿಕ ಒತ್ತಡ, ಅತಿಯಾಗಿ ಚಿಂತೆ ಮಾಡುವುದು ಕೂಡಾ ಮೊಡವೆಗೆ ಕಾರಣವಾಗಬಹುದು.
ಆಪಲ್ ಸೈಡ್ ವಿನೇಗರ್ ನ್ನು ಹಚ್ಚುವುದರಿಂದ ಮೊಡವೆ ಜೊತೆಗೆ ಕಲೆಯೂ ನಾಶವಾಗುತ್ತದೆ.