ಮೊಸರು ಬಳಸಿ ಮಾಡುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ರೆಸಿಪಿಗಳು

ಮೊಸರಿನಲ್ಲಿ ರೋಗ ನಿರೋಧಕ ಅಂಶ ಹೇರಳವಾಗಿದೆ. ಚಳಿಗಾಲದಲ್ಲಿ ದೇಹ ಆರೋಗ್ಯವಾಗಿರಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಮೊಸರು ಬಳಸಿ ಮಾಡುವ ಕ್ವಿಕ್ ರೆಸಿಪಿಗಳು ಇಲ್ಲಿವೆ.

Photo Credit: Instagram

ಟೊಮೆಟೊ, ಈರುಳ್ಳಿ, ಸೌತೆಕಾಯಿಗೆ ಮೊಸರು ಹಾಕಿ ಮಾಡುವ ಸಿಂಪಲ್ ಸಲಾಡ್ ಮಾಡಿ

ಎಳೆ ಬೆಂಡೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಬಾಡಿಸಿ ಮೊಸರು ಹಾಕಿ ರಾಯತ ಮಾಡಿ

ಕ್ಯಾಪ್ಸಿಕಂ ಕತ್ತರಿಸಿಕೊಂಡು ತುಪ್ಪದಲ್ಲಿ ಬಾಡಿಸಿಕೊಂಡು ಮೊಸರು ಹಾಕಿ ರಾಯತ ಮಾಡಬಹುದು

ಸಾಂಬ್ರಾಣಿ ಎಲೆಗಳನ್ನೂ ತುಪ್ಪದಲ್ಲಿ ಬಾಡಿಸಿಕೊಂಡು ಮೊಸರು ಹಾಕಿ ರಾಯತ ಮಾಡಬಹುದು

ಆಲೂಗಡ್ಡೆಯನ್ನು ಬೇಯಿಸಿ ಸ್ಮ್ಯಾಶ್ ಮಾಡಿ ಮೊಸರು, ಒಗ್ಗರಣೆ ಕೊಟ್ಟರೆ ರುಚಿಕರ ಗೊಜ್ಜು ರೆಡಿ

ಮೂಲಂಗಿಯನ್ನು ಚಿಕ್ಕದಾಗಿ ತುರಿದುಕೊಂಡು ಮೊಸರು, ಒಗ್ಗರಣೆ, ಉಪ್ಪು ಹಾಕಿಕೊಂಡು ಸೇವಿಸಿ

ಈ ಎಲ್ಲಾ ರಾಯತಗಳಿಗೆ ಬಳಸುವ ವಸ್ತುಗಳು ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ