ಗರ್ಭಕೋಶದ ಕ್ಯಾನ್ಸರ್ ಗೆ ಕಾರಣಗಳು, ಮುನ್ನೆಚ್ಚರಿಕೆಗಳು

ಇತ್ತೀಚೆಗಿನ ದಿನಗಳಲ್ಲಿ ತೀರಾ ಚಿಕ್ಕವಯಸ್ಸಿನ ಮಹಿಳೆಯರಲ್ಲೂ ಗರ್ಭಕೋಶದ ಕ್ಯಾನ್ಸರ್ ಎನ್ನುವುದು ಸಾಮಾನ್ಯವಾಗುತ್ತಿದೆ. ಇದಕ್ಕೆ ಕಾರಣಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಏನು ನೋಡೋಣ.

Photo Credit: Social Media

ಗರ್ಭಕೋಶದ ಕ್ಯಾನ್ಸರ್ ಆರಂಭದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ಪಡೆದುಕೊಂಡರೆ ಪರಿಹಾರವಿದೆ

ಚಯಾಪಚಯ ಕ್ರಿಯೆಗಳು ಸರಿಯಾಗಿ ಆಗದೇ ಇದ್ದಾಗ ಗರ್ಭಕೋಶದ ಕ್ಯಾನ್ಸರ್ ಗೆ ಕಾರಣವಾಗಬಹುದು

ಈಸ್ಟ್ರೋಜನ್ ಹಾರ್ಮೋನ್ ಉತ್ಪತ್ತಿ ಹೆಚ್ಚಿ ಹಾರ್ಮೋನ್ ಅಸಮತೋಲನವಾಗುವುದು ಕಾರಣವಾಗಬಹುದು

ಕೆಲವೊಂದು ಸಂದರ್ಭದಲ್ಲಿ ವಂಶವಾಹೀ ಕಾರಣಗಳಿಂದಲೂ ಈ ಸಮಸ್ಯೆಯಾಗಬಹುದು

ಯಾವತ್ತೂ ದೈಹಿಕ ವ್ಯಾಯಾಮ ಮಾಡುವ ಮೂಲಕ ತೂಕ ಸಮತೋಲದಲ್ಲಿರಿಸಿ

ಧೂಮಪಾನ, ಮದ್ಯಪಾನದಂತಹ ಅನಾರೋಗ್ಯಕರ ಅಭ್ಯಾಸಗಳನ್ನು ತ್ಯಜಿಸಿ

ಚಯಾಪಚಯ ಕ್ರಿಯೆ ಸುಗಮವಾಗುವಂತೆ ಆಹಾರ ಕ್ರಮ ಅಭ್ಯಾಸ ಮಾಡಿಕೊಳ್ಳಿ.