ಹುಬ್ಬಿನ ಕೂದಲು ಉದುರುವಿಕೆಗೆ ಕಾರಣ ಮತ್ತು ಪರಿಹಾರ

ತಲೆಕೂದಲು ಉದುರುವಂತೆ ಹುಬ್ಬಿನ ಕೂದಲು ಉದುರುವಿಕೆ ಸಮಸ್ಯೆ ಹಲವರಿಗಿರುತ್ತದೆ. ಇದರಿಂದ ಹುಬ್ಬಿನ ಕೂದಲು ದಟ್ಟತೆ ಕಳೆದುಕೊಳ್ಳಬಹುದು. ಹುಬ್ಬು ದಟ್ಟವಾಗಿ ಇಲ್ಲದೇ ಇದ್ದರೆ ಮುಖದ ಸೌಂದರ್ಯ ಹಾಳಾಗುತ್ತದೆ. ಹಾಗಿದ್ದಲ್ಲಿ ಹುಬ್ಬಿನ ಕೂದಲು ಉದುರಲು ಕಾರಣ ಮತ್ತು ಪರಿಹಾರವೇನು ನೋಡೋಣ.

credit: social media

ಹುಬ್ಬಿನಲ್ಲಿ ತುರಿಕೆ ಜೊತೆಗೆ ಹೊಟ್ಟಿನಂತಾಗಿದ್ದರೆ ಇದಕ್ಕೆ ಯಾವುದಾದರೂ ಸೋಂಕು ಕಾರಣವಾಗಿರಬಹುದು

ಹುಬ್ಬಿನ ಕೂದಲು ಉದುರುತ್ತಿದ್ದರೆ ನಿಮ್ಮ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಕಾರಣವಾಗಿರಬಹುದು

ಕಬ್ಬಿಣದಂಶ, ವಿಟಮಿನ್ ಹೇರಳವಾಗಿರುವ ಆಹಾರಗಳನ್ನು ಸೇವಿಸಿ ಹುಬ್ಬಿನ ಕೂದಲು ಉದುರುದಂತೆ ನೋಡಿಕೊಳ್ಳಿ

ಅತಿಯಾದ ಮೇಕಪ್ ಮಾಡುತ್ತಿದ್ದರೆ, ರಾಸಾಯನಿಕಗಳನ್ನು ಬಳಸುತ್ತಿದ್ದರೆ ಬಿಟ್ಟು ಬಿಡಿ

ಹುಬ್ಬಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ನಿಯಮಿತವಾಗಿ ಚೆನ್ನಾಗಿ ಮಸಾಜ್ ಮಾಡುತ್ತಿದ್ದರೆ ಉತ್ತಮ

ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ