ಈ ಅಭ್ಯಾಸಗಳು ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸಬಹುದು

ನಮ್ಮ ದೇಹ ಆರೋಗ್ಯವಾಗಿರಲು ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕು. ಕೆಲವೊಂದು ಅಭ್ಯಾಸಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸಲು ಕಾರಣವಾಗಬಹುದು.

Photo Credit: Social Media

ಆರೋಗ್ಯಕರ ಅವಧಿಯಷ್ಟು ನಿದ್ರೆ ಮಾಡದೇ ಇರುವುದು ನಿರೋಧಕ ಶಕ್ತಿ ಕಡಿಮೆಗೊಳಿಸಬಹುದು

ದೈಹಿಕ ಚಟುವಟಿಕೆ ಕಡಿಮೆಯಾದರೆ ರೋಗ ನಿರೋಧಕ ಶಕ್ತಿ ಕುಂಠಿತವಾಗಬಹುದು

ಅತಿಯಾದ ಮಾನಸಿಕ ಒತ್ತಡಗಳಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು

ಸೂಕ್ತ ಪೋಷಕಾಂಶಗಳಿರುವ ಆಹಾರ ಸೇವನೆ ಮಾಡದೇ ಇದ್ದಾಗ ಕುಂಠಿತವಾಗಬಹುದು

ಅತಿಯಾಗಿ ಆಂಟಿ ಬಯೋಟಿಕ್ ಗುಳಿಗೆ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕುಂದಬಹುದು

ಸಕ್ಕರೆ ಅಥವಾ ಸಂಸ್ಕರಿತ ಸಿಹಿ ಅಂಶ ಹೆಚ್ಚು ಸೇವನೆ ಮಾಡುವುದರಿಂದ ಹೀಗಾಗಬಹುದು

ಶರೀರಕ್ಕೆ ವಿಟಮಿನ್ ಡಿ ಅಂಶ ಹೇರಳವಾಗಿ ಸಿಗದೇ ಇದ್ದಾಗ ರೋಗ ನಿರೋಧ ಶಕ್ತಿ ಕುಂದಬಹುದು