ಇಡ್ಲಿ ಕಲ್ಲಿನಂತಾಗುತ್ತದೆಯೇ ಕಾರಣವೇನು

ಹೇಗೇ ಮಾಡಿದರೂ, ಏನೇ ಮಾಡಿದರೂ ಇಡ್ಲಿ ಮೃದುವಾಗುತ್ತಿಲ್ಲ, ಕಲ್ಲಿನಂತಾಗುತ್ತದೆ ಎಂಬ ಚಿಂತೆಯೇ. ಅದಕ್ಕೆ ನೀವು ಇಡ್ಲಿ ಮಾಡುವಾಗ ಮಾಡುವ ಈ ಕೆಲವು ತಪ್ಪುಗಳು ಕಾರಣವಿರಬಹುದು. ಅದೇನೆಂದು ನೋಡಿ.

Photo Credit: Instagram, Facebook

ಇಡ್ಲಿ ಮಾಡುವಾಗ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಹದವಾದ ಪ್ರಮಾಣದಲ್ಲಿ ಹಾಕುವುದು ಮುಖ್ಯ

ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳದೇ ತರಿ ತರಿಯಾಗಿ ರುಬ್ಬಿದರೆ ಗಟ್ಟಿಯಾಗಬಹುದು

ಇಡ್ಲಿ ಅಕ್ಕಿಯ ಬದಲು ದೋಸೆ ಅಕ್ಕಿಯನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ಗಟ್ಟಿಯಾಗಬಹುದು

ಇಡ್ಲಿ ಹಿಟ್ಟನ್ನು ಹುಳಿ ಬರುವ ಮೊದಲೇ ಬೇಯಿಸಿದರೆ ಇಡ್ಲಿ ಗಟ್ಟಿಯಾಗುವ ಸಾಧ್ಯತೆಯಿದೆ

ಇಡ್ಲಿ ಅಕ್ಕಿಯನ್ನು ನೆನೆ ಹಾಕುವಾಗ ಸರಿಯಾಗಿ ನೆನೆಯುವ ಮೊದಲೇ ರುಬ್ಬಿಕೊಂಡರೆ ಗಟ್ಟಿಯಾಗಬಹುದು

ಇಡ್ಲಿ ಹಿಟ್ಟಿಗೆ ಹದವಾದ ಪ್ರಮಾಣದಲ್ಲಿ ನೀರು ಹಾಕದೇ ಇದ್ದಾಗ ಇಡ್ಲಿ ಗಟ್ಟಿಯಾಗಬಹುದು

ಇಡ್ಲಿಯನ್ನು ಅಗತ್ಯಕ್ಕಿಂತ ಹೆಚ್ಚು ಬೇಯಿಸಿದರೆ ಗಟ್ಟಿಯಾಗುವ ಸಾಧ್ಯತೆಯಿರುತ್ತದೆ