ಮಕ್ಕಳು ಯಾವ ವಯಸ್ಸಿನಲ್ಲಿ ಯಾವ ಭಂಗಿಯಲ್ಲಿ ಮಲಗಬೇಕು

ಮಲಗಿರುವ ಮಗುವನ್ನು ನೋಡುವುದೇ ಚೆಂದ. ಆದರೆ ಪುಟ್ಟ ಮಕ್ಕಳು ಮಲಗುವ ಭಂಗಿ ಕೂಡಾ ಅವರ ಆರೋಗ್ಯ ಮತ್ತು ಬೆಳವಣಿಗೆಗೆ ಪೂರಕವಾಗಿರುತ್ತದೆ. ಮಕ್ಕಳು ಯಾವ ವಯಸ್ಸಿನಲ್ಲಿ ಯಾವ ಭಂಗಿಯಲ್ಲಿ ಮಲಗಬೇಕು ಎಂದು ಇಲ್ಲಿ ನೋಡಿ.

Photo Credit: Instagram, Freepik

ಆಗ ತಾನೇ ಜನಿಸಿದ ನವಜಾತ ಶಿಶು ಅಂಗಾತ ಸಮತಟ್ಟಾದ ಜಾಗದಲ್ಲಿ ಮಲಗುವುದು ಸೂಕ್ತ

ಇದರಿಂದ ಅವರ ಬೆನ್ನಿಗೆ ಸಪೋರ್ಟ್ ಮತ್ತು ಬೆನ್ನುಲುಬು ಗಟ್ಟಿಯಾಗಲು ಸಹಾಯವಾಗುತ್ತದೆ

ನವಜಾತ ಮಕ್ಕಳು ಹೊಟ್ಟೆಯ ಮೇಲೆ ಮಲಗಿದರೆ ಉಸಿರಾಟದ ಸಮಸ್ಯೆ ಎದುರಾಗುವ ಅಪಾಯವಿದೆ

ಆಗಷ್ಟೇ ಹಾಲು ಕುಡಿದ ಮಗು ಹೊಟ್ಟೆಯ ಮೇಲೆ ಮಲಗಿ ನಿದ್ರಿಸಿದರೆ ಜಿರ್ಣಕ್ರಿಯೆಗೆ ತೊಂದರೆಯಾಗಬಹುದು

ತಾನಾಗಿಯೇ ನಿದ್ರೆಯಲ್ಲಿ ಹೊಟ್ಟೆಯ ಮೇಲೆ ಮಲಗಿದರೂ ಅದನ್ನು ಮತ್ತೆ ಅಂಗಾತ ಸ್ಥಿತಿಗೆ ತರಬೇಕು

ಮಗುವಿಗೆ ಒಂದು ವರ್ಷ ದಾಟಿದ ಬಳಿಕ ಹೊಟ್ಟೆಯ ಮೇಲೆ ಮಲಗಲು ಯಾವುದೇ ಸಮಸ್ಯೆಯಿಲ್ಲ

ಒಂದು ವರ್ಷದ ನಂತರ ಮಗು ಒಂದು ಬದಿಗೆ ಓರೆಯಾಗಿಯೂ ಮಲಗುವುದಕ್ಕೆ ತೊಂದರೆಯಿಲ್ಲ