ದ್ರಾಕ್ಷಿ ತೊಳೆಯುವ ಸರಿಯಾದ ಕ್ರಮ

ದ್ರಾಕ್ಷಿಯಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳಿರುತ್ತವೆ. ಇದನ್ನು ಸೇವನೆ ಮಾಡುವ ಮೊದಲು ಸರಿಯಾಗಿ ತೊಳೆಯುವುದು ಮುಖ್ಯ. ಹೀಗಾಗಿ ದ್ರಾಕ್ಷಿಯಲ್ಲಿರುವ ರಾಸಾಯನಿಕ ಅಂಶಗಳು ಹೋಗಲು ಸರಿಯಾದ ರೀತಿಯಲ್ಲಿ ತೊಳೆಯುವುದು ಹೇಗೆ ನೋಡಿ.

Photo Credit: Instagram, AI image

ದ್ರಾಕ್ಷಿಯ ಹೊರಾವರಣದಲ್ಲಿರುವ ರಾಸಾಯನಿಕ ತೊಳೆಯಲು ಉಪ್ಪು ನೀರಿನಲ್ಲಿ ಕೆಲವು ಕಾಲ ನೆನೆಸಿಡಿ

ಬಳಿಕ ಇದನ್ನು ಹರಿಯುವ ನೀರಿನಲ್ಲಿ ಬಿಡಿ ಬಿಡಿಯಾಗಿ ಮಾಡಿ ಚೆನ್ನಾಗಿ ತೊಳೆಯಿರಿ

ಇಲ್ಲವೇ ಬೇಕಿಂಗ್ ಸೋಡಾ ದ್ರಾವಣ ಮಾಡಿ ಅದರಲ್ಲಿ ಕೆಲವು ಹೊತ್ತು ದ್ರಾಕ್ಷಿ ನೆನೆಸಿಡಬಹುದು

ಕೋಲ್ಡ್ ನೀರಿನಲ್ಲಿ 10 ನಿಮಿಷ ದ್ರಾಕ್ಷಿ ನೆನೆಸಿಟ್ಟು ಬಳಿಕ ನಾರ್ಮಲ್ ನೀರಿನಿಂದ ತೊಳೆಯಿರಿ

ವಿನೇಗರ್ ಮತ್ತು ಬೇಕಿಂಗ್ ಸೋಡಾ ದ್ರಾವಣ ಮಾಡಿಕೊಂಡು ಅದರಲ್ಲಿ ತೊಳೆಯಿರಿ

ದ್ರಾಕ್ಷಿ ತೊಳೆದ ನಂತರ ಅದರ ನೀರು ಸಂಪೂರ್ಣವಾಗಿ ಆರಲು ಬಿಡಿ

ಬಳಿಕವಷ್ಟೇ ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟರೆ ಅದು ಶುದ್ಧವಾಗುವುದಲ್ಲದೆ, ಕೊಳೆಯುವುದೂ ಇಲ್ಲ