ಚಿರಯವ್ವನ ಪಡೆಯಲು ಇಲ್ಲಿವೆ ಸರಳ ಆಹಾರಗಳು

ಮನುಷ್ಯ ಅಂದ್ಮೇಲೆ ವರ್ಷದಿಂದ ವರ್ಷಕ್ಕೆ ವಯಸ್ಸಾಗುತ್ತಾ ಹೋಗುತ್ತದೆ. ಮುಖದ ಕಾಂತಿ ಕಳೆದುಕೊಳ್ಳುವುದು, ಚರ್ಮ ಸುಕ್ಕುಗಟ್ಟುವುದು ಮೊದಲಾದ ರೀತಿಯಲ್ಲಿ ವಯಸ್ಸು ಗೊತ್ತಾಗುತ್ತದೆ. ಆದರೆ ನಿಮಗೆ ಗೊತ್ತಾ. ನಿಮಗೆ ಎಷ್ಟು ವಯಸ್ಸಾದರೂ ನೀವು ಯಂಗ್ ಆಗಿಯೇ ಕಾಣಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ.

photo credit social media

ಸುಂದರವಾಗಿ ಕಾಣಬೇಕು, ಯಾವಾಗಲೂ ಯಂಗ್ ಆಗಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದರೆ, ಮನುಷ್ಯ ಅಂದ್ಮೇಲೆ ವರ್ಷದಿಂದ ವರ್ಷಕ್ಕೆ ವಯಸ್ಸಾಗುತ್ತಾ ಹೋಗುತ್ತದೆ. ಆದರೆ, ಸಮರ್ಪಕ ಜೀವನಶೈಲಿ, ವ್ಯಾಯಾಮ, ಯೋಗ ಮೊದಲಾದವುಗಳನ್ನು ಅನುಸರಿಸುವುದರಿಂದ ನೀವು ಯಾವಾಗಲೂ ಯಂಗ್ ಆಗಿ ಕಾಣಬಹುದು.

ಆರೋಗ್ಯಕರ ಆಹಾರಾಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ವಯಸ್ಸಾಗುವ ಪ್ರಕ್ರಿಯೆಯು ಅನಿವಾರ್ಯವಾಗಿದೆ. ವರ್ಷಗಳು ಕಳೆದಂತೆ, ದೇಹವು ಕೆಲವೊಂದು ನಿಲ್ಲಿಸಲಾಗದ ಬದಲಾವಣೆಗಳಿಗೆ ಒಳಗಾಗುತ್ತದೆ.

ಜಂಕ್ ಫುಡ್ ಆರೋಗ್ಯಕ್ಕೆ ಉತ್ತಮವಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೆಯೇ ಜಂಕ್ ಫುಡ್ ಸೇವನೆ ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹೀಗಾಗಿ ಕರಿದ ತಿಂಡಿ, ಪ್ಯಾಕೆಟ್ ತಿಂಡಿ ಮೊದಲಾದ ಜಂಕ್ ಫುಡ್‌ಗಳನ್ನು ತಿನ್ನದಿರಿ. ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ. ಸಿಹಿ ತಿನಿಸುಗಳನ್ನು, ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿ.

ಹೆಚ್ಚು ಜಂಕ್ ಫುಡ್ ತಿನ್ನುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದು ಈಗಿನಿಂದ 10 ಅಥವಾ 20 ವರ್ಷಗಳ ನಂತರ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ನೀವು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಲು ಬಯಸಿದರೆ, ಜಂಕ್ ಫುಡ್‌ಗಳ ಸೇವನೆಯನ್ನು ತಪ್ಪಿಸಿ. ಇದರ ಬದಲು ಹೆಚ್ಚು ಸೊಪ್ಪು-ತರಕಾರಿಗಳನ್ನು ತಿನ್ನಿರಿ.

ಆಹಾರದಲ್ಲಿ ಮೀನಿನ ಖಾದ್ಯಗಳನ್ನು ಸೇರಿಸುವುದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ, ಮೀನು ತಿನ್ನುವವರಿಗೆ ವಯಸ್ಸೇ ಆಗುವುದಿಲ್ಲ. ಮೀನಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳಿಂದ ತುಂಬಿದೆ. ಇದು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.

ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ವಯಸ್ಸಾದ ಪ್ರಕ್ರಿಯೆಯ ವಿರುದ್ಧ ಹೋರಾಡಲು ಸಹಾಯಕ ಮಾಡುವ ಅಭ್ಯಾಸವಾಗಿದೆ. ಹಣ್ಣು , ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಸಮೃದ್ಧವಾಗಿದೆ, ಇದು ವಯಸ್ಸಾಗುವ ಋಣಾತ್ಮಕ ಪರಿಣಾಮಗಳನ್ನು ಎದುರಿಸುತ್ತದೆ.

ಮಾಂಸ ಸೇವನೆಯನ್ನು ಕಡಿಮೆ ಮಾಡುವುದು. ಮಾಂಸದ ಬದಲಿಗೆ ಬೀನ್ಸ್ ಮತ್ತು ದ್ವಿದಳ ಧಾನ್ಯಗಳಂತಹ ಸಸ್ಯ ಆಧಾರಿತ ಪ್ರೋಟೀನ್‌ (Protein)ಗಳ ಸೇವನೆಯನ್ನು ಹೆಚ್ಚಿಸುವುದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.