ಕೃತಕ ಬಣ್ಣದ ಆಹಾರ ಸೇವನೆಯ ಅಡ್ಡಪರಿಣಾಮಗಳು

ಜನರನ್ನು ಆಕರ್ಷಿಸಲು ಆಹಾರ ವಸ್ತುಗಳಿಗೆ ಕೃತಕ ಬಣ್ಣಗಳನ್ನು ಹಾಕಲಾಗುತ್ತದೆ. ಬಣ್ಣದ ಆಕರ್ಷಣೆಗೆ ಮರುಳಾಗಿ ಸೇವಿಸುವ ಇಂತಹ ಆಹಾರ ವಸ್ತಗಳಿಂದ ನಮ್ಮ ಆರೋಗ್ಯಕ್ಕೆ ಕುತ್ತಾಗಬಹುದು. ಅವುಗಳಿಂದಾಗುವ ಅಡ್ಡಪರಿಣಾಮಗಳೇನು ನೋಡೋಣ.

Photo Credit: Social Media

ಆಹಾರ ವಸ್ತುವನ್ನು ಖರೀದಿಸುವಾಗ ಅದಕ್ಕೆ ಬಳಕೆ ಮಾಡಿರುವ ವಸ್ತುಗಳೇನು ಎಂದು ಪರಿಶೀಲಿಸಿ ಖರೀದಿಸಿ

ತರಕಾರಿ, ಹಣ್ಣುಗಳಾದರೆ ಯಾವಾಗಲೂ ಕತ್ತರಿಸಿಟ್ಟಿರುವುದರ ಬದಲು ಸಂಪೂರ್ಣವಾಗಿರುವುದನ್ನು ಖರೀದಿಸಿ

ಕೃತಕ ಬಣ್ಣಗಳನ್ನು ಹಾಕಿರುವ ಆಹಾರ ವಸ್ತುಗಳಿಂದ ಮುಖ್ಯವಾಗಿ ಕ್ಯಾನ್ಸರ್ ರೋಗದ ಅಪಾಯವಿದೆ.

ಕೃತಕ ಬಣ್ಣ ಅಳವಡಿಸಿರುವ ಆಹಾರ ಸೇವನೆಯಿಂದ ಮಕ್ಕಳಲ್ಲಿ ಗಮನದ ಕೊರತೆ (ಎಡಿಎಚ್ ಡಿ) ರೋಗ ಬರಬಹುದು

ಕೃತಕ ಬಣ್ಣಗಳು ನಮ್ಮ ಚರ್ಮದಲ್ಲಿ ಅಥವಾ ಕರುಳಿನಲ್ಲಿ ಅಲರ್ಜಿ ಸಮಸ್ಯೆಗಳಿಗೆ ಕಾರಣವಾಗಬಹುದು

ಅಸ್ತಮಾದಂತಹ ಕಾಯಿಲೆ ಇರುವವರು ಇಂತಹ ಆಹಾರ ಸೇವಿಸಿದರೆ ಸಮಸ್ಯೆ ಹೆಚ್ಚಾಗಬಹುದು

ಆಹಾರ ಅಲರ್ಜಿ ಇರುವ ವ್ಯಕ್ತಿಗಳು ಇಂತಹ ಆಹಾರ ಸೇವಿಸಿದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾಗಬಹುದು