ಊಟದ ನಂತರ ಐಸ್ ಕ್ರೀಂ ತಿನ್ನಬೇಡಿ

ಊಟವಾದ ತಕ್ಷಣ ಒಂದು ಐಸ್ ಕ್ರೀಂ ಸವಿಯುವ ಅಭ್ಯಾಸ ನಮ್ಮಲ್ಲಿ ಹೆಚ್ಚಿನವರಿಗಿದೆ. ಆದರೆ ಊಟವಾದ ತಕ್ಷಣ ಐಸ್ ಕ್ರೀಂ ತಿನ್ನುವುದರಿಂದ ಆರೋಗ್ಯದ ಮೇಲೆ ಕೆಲವು ದುಷ್ಪರಿಣಾಮಗಳಾಗುತ್ತವೆ. ಅದೇನೆಂದು ನೋಡೋಣ.

credit: social media

ಐಸ್ ಕ್ರೀಂ ಸೇವನೆಯಿಂದ ಬಾಯಿಗೆ ಸಿಹಿ, ಹೊಟ್ಟೆ ತಂಪಗಾಗಿಸಿ, ಹೊಟ್ಟೆ ತುಂಬಿದಂತೆ ಅನಿಸಬಹುದು.

ಐಸ್ ಕ್ರೀಂನಲ್ಲಿ ಅತಿಯಾದ ಸಿಹಿ ಅಂಶವಿದ್ದು, ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ

ಐಸ್ ಕ್ರೀಂನಲ್ಲಿ ಕೊಬ್ಬಿನಂಶ ಮತ್ತು ಕ್ಯಾಲೊರಿ ಹೆಚ್ಚಿನ ಪ್ರಮಾಣದಲ್ಲಿ ತೂಕ ಹೆಚ್ಚಳವಾಗಬಹುದು

ಐಸ್ ಕ್ರೀಂ ಬಾಯಿಗಿಟ್ಟರೆ ತಂಪು ಅನುಭವ ಕೊಟ್ಟರೂ ಇದರಿಂದ ದೇಹ ಡಿಹೈಡ್ರೇಟ್ ಆಗಬಹುದು

ಊಟವಾದ ತಕ್ಷಣ ಸಿಹಿ ಗುಣವಿರುವ ಐಸ್ ಕ್ರೀಂ ಸೇವನೆಯಿಂದ ಹಲ್ಲು ಹುಳುಕಾಗಬಹುದು

ಐಸ್ ಕ್ರೀಂ ಸೇವನೆ ಮಾಡುವುದರಿಂದ ಬಾಡಿ ಹೀಟ್ ಹೆಚ್ಚಾಗಬಹುದು

ತಂಪು ಗುಣವಿರುವ ಐಸ್ ಕ್ರೀಂ ಸೇವಿಸುವುದರಿಂದ ಉಷ್ಣಾಂಶ ಸಮತೋಲನ ತಪ್ಪಬಹುದು