ಒಬ್ಬೊಬ್ಬರ ನಾಲಿಗೆ ರುಚಿ ಒಂದೊಂದು ಥರಾ ಇರುತ್ತದೆ. ಕೆಲವರಿಗೆ ಅತಿಯಾದ ಖಾರ ಸೇವನೆ ಮಾಡುವುದು ಎಂದರೆ ಬಲು ಇಷ್ಟ. ಆದರೆ ನಾಲಿಗೆಗೆ ರುಚಿಯಾದರೂ ದೀರ್ಘ ಕಾಲ ಖಾರದ ಆಹಾರ ವಸ್ತು ಸೇವಿಸುವುದರಿಂದ ಬರಬಹುದಾದ ಸಮಸ್ಯೆಗಳೇನು ನೋಡಿ.
credit: social media
ಪ್ರತಿನಿತ್ಯ ಖಾರದ ಆಹಾರ ಸೇವಿಸುವುದರಿಂದ ಕೆಳ ಹೊಟ್ಟೆ ನೋವು ಬರಬಹುದು
ಹೊಟ್ಟೆ ಉರಿ, ಎದೆ ಉರಿ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮ್ಯೆಗೆ ಕಾರಣವಾಗಬಹುದು
ಅತಿಯಾದ ಖಾರ ಸೇವಿಸುವುದರಿಂದ ಅಸಿಡಿಟಿಯಾಗಿ ತಲೆನೋವು ಸಮಸ್ಯೆ ಬರಬಹುದು
ಅತಿಯಾದ ಖಾರ ದೇಹಕ್ಕೆ ಒಗ್ಗಿಕೊಳ್ಳದೇ ಇದ್ದಾಗ ವಿಪರೀತ ವಾಕರಿಕೆಯಿಂದ ನಿತ್ರಾಣವಾಗಬಹುದು
ಅತಿಯಾದ ಖಾರ ಸೇವನೆ ಕಿಡ್ನಿ ಸಂಬಂಧಿದ ಸಮಸ್ಯೆಗಳು, ಉರಿ ಮೂತ್ರ ಸಮಸ್ಯೆಗೆ ಕಾರಣವಾಗಬಹುದು
ಅತಿಯಾದ ಖಾರ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಯಾಗಿ ಮಲಬದ್ಧತೆಯಾಗುವ ಸಾಧ್ಯತೆಯಿದೆ.
ಅತಿಯಾದ ಖಾರ ಸೇವನೆ ಕೆಲವರಿಗೆ ಆಹಾರ ಅಲರ್ಜಿಗೆ ಕಾರಣವಾಗಬಹುದು, ಎಚ್ಚರಿಕೆಯಿರಲಿ