ನೆಲಗಡಲೆ ಹೆಚ್ಚು ತಿಂದರೆ ಹೀಗೆಲ್ಲಾ ಆಗುತ್ತೆ

ಬಡವರ ಬಾದಾಮಿ ಎಂದೇ ಕರೆಯುವ ನೆಲಗಡಲೆಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ಆರೋಗ್ಯಕ್ಕೆ ಒಳ್ಳೆಯದೇನೋ ಹೌದು. ಆದರೆ ಅತಿಯಾಗಿ ತಿಂದರೆ ಅಡ್ಡಪರಿಣಾಮಗಳೂ ಇವೆ.

Photo Credit: Social Media

ನೆಲಗಡಲೆಯನ್ನು ಅತಿಯಾಗಿ ತಿನ್ನುವುದರಿಂದ ವಾಂತಿ ಬಂದಂತಾಗಬಹುದು

ನೆಲಗಡಲೆಯನ್ನು ತಿಂದ ತಕ್ಷಣ ನೀರು ಕುಡಿದಲ್ಲಿ ಬೇಧಿಯಾಗುವ ಸಾಧ್ಯತೆಯಿದೆ.

ನೆಲಗಡಲೆ ಪಿತ್ತ ಕೆರಳಿಸಬಹುದಾಗಿದ್ದು ಇದರಿಂದ ತಲೆನೋವು, ಅಜೀರ್ಣ ಸಮಸ್ಯೆಯಾಗಬಹುದು

ಚರ್ಮದ ಅಲರ್ಜಿ ಸಮಸ್ಯೆಯಿರುವವರಿಗೆ ನೆಲಗಡಲೆ ಸೇವನೆ ಅಲರ್ಜಿ ಹೆಚ್ಚಿಸಬಹುದು

ನೆಲಗಡಲೆ ಜೀರ್ಣಕ್ರಿಯೆಗೆ ಸಮಸ್ಯೆ ತರಬಲ್ಲದು ಅಲ್ಲದೆ ಮಿನರಲ್ಸ್ ಹೀರಲು ಅಡ್ಡಿಯಾಗಬಹುದು

ತೂಕ ಹೆಚ್ಚಿಸಿಕೊಳ್ಳಲು ನೆಲಗಡಲೆ ಒಳ್ಳೆಯದು, ಆದರೆ ಹೆಚ್ಚು ತಿಂದರೆ ಬೊಜ್ಜಿಗೆ ಕಾರಣವಾಗಬಹುದು

ಚರ್ಮದ ಅಲರ್ಜಿ, ಆಹಾರ ಅಲರ್ಜಿ ಇರುವವರು ನೆಲಗಡಲೆಯನ್ನು ಆದಷ್ಟು ದೂರವಿಟ್ಟರೆ ಉತ್ತಮ