ಕಪ್ಪು ಕಲೆಯಿರುವ ಈರುಳ್ಳಿ ತಿನ್ನುವುದು ಅಪಾಯಕಾರಿ

ಕೆಲವೊಂದು ಈರುಳ್ಳಿಯ ಹೊರಾವರಣದಲ್ಲಿ ಕಪ್ಪು ಕಲೆ ಅಥವಾ ಮಸಿಯಂತೆ ಕಂಡುಬರುತ್ತದೆ. ಈ ರೀತಿ ಕಪ್ಪು ಕಲೆಯಿರುವ ಈರುಳ್ಳಿ ಸೇವನೆ ಮಾಡುವುದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

Photo Credit: Instagram, WD

ಹೊರ ಪದರದಲ್ಲಿ ಕಪ್ಪು ಮಸಿಯಂತಿರುವುದು ಶಿಲೀಂಧ್ರವಾಗಿದ್ದು ಇದು ಆರೋಗ್ಯಕ್ಕೆ ಉತ್ತಮವಲ್ಲ

ಕಪ್ಪು ಬಣ್ಣದ ಶಿಲೀಂಧ್ರದಿಂದ ವಾಂತಿ, ತಲೆನೋವು, ಹೊಟ್ಟೆನೋವಿನಂತಹ ಸಮಸ್ಯೆ ಬರಬಹುದು

ಕಪ್ಪು ಮಸಿ ಕಂಡುಬಂದರೆ ಆ ಪದರವನ್ನು ಕಿತ್ತು ಒಳಗಿನ ಪದರವನ್ನು ಮಾತ್ರ ಬಳಕೆ ಮಾಡಿ

ಈ ಶಿಲೀಂಧ್ರದ ಅಂಶವು ನೀರಿನಿಂದ ತೊಳೆದರೂ ಹೋಗುವುದಿಲ್ಲ ಎಂಬುದು ನೆನಪಿರಲಿ

ಈ ಶಿಲೀಂಧ್ರ ಮಣ್ಣಿನಿಂದ ಬರುತ್ತದೆ ಮತ್ತು ಅಲರ್ಜಿಗೂ ಕಾರಣವಾಗಬಹುದು

ಅಸ್ತಮಾ, ಉಸಿರಾಟದಂತಹ ಸಮಸ್ಯೆಯಿರುವವರು ಇಂತಹ ಈರುಳ್ಳಿಯನ್ನು ಸೇವನೆ ಮಾಡಬಾರದು

ಇಂತಹ ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿಡುವುದರಿಂದ ಅದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ