ವಿಟಮಿನ್ ಮಾತ್ರೆ ಹೆಚ್ಚು ತಿಂದರೆ ಏನಾಗುತ್ತದೆ

ನಮ್ಮ ದೇಹದಲ್ಲಿ ಪೋಷಕಾಂಶ ಕಡಿಮೆಯಾದಾಗ ವೈದ್ಯರು ವಿಟಮಿನ್ ಮಾತ್ರೆ, ಔಷಧಿಗಳನ್ನು ಸೇವಿಸಲು ಹೇಳುತ್ತಾರೆ. ಆದರೆ ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಹಾಗೆಯೇ ವಿಟಮಿನ್ ಮಾತ್ರೆ ಹೆಚ್ಚಾದರೆ ಏನಾಗುತ್ತದೆ ನೋಡೋಣ.

credit: social media

ವಿಟಮಿನ್ ಮಾತ್ರೆ ಸೇವಿಸುವುದರಿಂದ ವಿಷಾಂಶ ಹೆಚ್ಚಾಗಬಹುದು, ಅಡ್ಡಪರಿಣಾಮವಾಗಬಹುದು

ವಾಂತಿ, ತಲೆಸುತ್ತುವಿಕೆ, ಅಂಗಾಂಗಳ ವೈಫಲ್ಯ ಅಥವಾ ದೇಹ ತೂಕ ಹೆಚ್ಚಾಗಬಹುದು

ಬೇಧಿ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಜೀರ್ಣಕ್ರಿಯೆಗೆ ತೊಂದರೆ

ವಿಟಮಿನ್ ಸಿ, ಕ್ಯಾಲ್ಶಿಯಂ ಹೆಚ್ಚಾದರೆ ಕಿಡ್ನಿ ಸ್ಟೋನ್ ಬರಬಹುದು

ವಿಟಮಿನ್ ಬಿ6 ಅಂಶ ಹೆಚ್ಚಾದರೆ ನರಗಳಿಗೆ ತೊಂದರೆಯಾಗಬಹುದು.

ವಿಟಮಿನ್ ಮಾತ್ರೆಗಳನ್ನು ಎಷ್ಟು ಸೇವಿಸಬೇಕು ಎಂದು ವೈದ್ಯರ ಸಲಹೆ ಪಡೆಯಬೇಕು

ಅಗತ್ಯಕ್ಕಿಂತ ಹೆಚ್ಚು ವಿಟಮಿನ್ ಮಾತ್ರೆ ಬೇರೆ ರೋಗಗಳಿಗೆ ಕಾರಣವಾಗಬಹುದು