ಪಾನಿಪೂರಿ ಸೇವನೆ ದುಷ್ಪರಿಣಾಮಗಳು

ರಸ್ತೆ ಬದಿಯ ಜಂಕ್ ಫುಡ್ ಗಳಲ್ಲಿ ಪ್ರಪ್ರಥಮ ಸ್ಥಾನದಲ್ಲಿ ನಿಲ್ಲುವ ಅತ್ಯಂತ ರುಚಿಕರ ಮತ್ತು ಅಷ್ಟೇ ಕಲುಷಿತ ಆಹಾರ ಪದಾರ್ಥ ಇದಾಗಿದೆ. ಈಗಿನ ಕಾಲದಲ್ಲಿ ದೊಡ್ಡವರು, ಚಿಕ್ಕವರು, ಮಹಿಳೆಯರು ಎನ್ನದೆ ಸಂಜೆಯಾಗುತ್ತಲೇ ಬಹುತೇಕ ಮಂದಿ ಮನೆಯ ದಾರಿಯನ್ನು ಹಿಡಿಯುವ ಬದಲು ಪಾನಿಪುರಿ ಮಾರುವವನ ಮುಂದೆ ಪ್ಲೇಟ್ ಹಿಡಿದು ಕ್ಯೂ ನಿಂತಿರುತ್ತಾರೆ.

photo credit social media

ನೀವು ಪಾನಿಪುರಿ ಮಾರುವವರನ್ನು ಸ್ವಲ್ಪ ಹೊತ್ತು ಅಲ್ಲೇ ನಿಂತು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಈ ವಿಚಾರ ನಿಮಗೆ ಅರಿವಿಗೆ ಬರುತ್ತದೆ. ಪಾನಿಪುರಿ ಮಾರುವ ವ್ಯಕ್ತಿ ಆಗಾಗ ತನ್ನ ಕೈ ಒರೆಸಿಕೊಳ್ಳಲು ಒಂದು ಬಟ್ಟೆ ಇಟ್ಟುಕೊಂಡಿರುತ್ತಾನೆ. ಆ ಬಟ್ಟೆಯ ಸ್ವಚ್ಛತೆ ನಿಜಕ್ಕೂ ದೇವರಿಗೇ ಪ್ರೀತಿ.

ಒಂದು ವೇಳೆ ಪಾನಿಪುರಿ ಮಾರುವವನ ಕೈಗಳು ಸ್ವಚ್ಛವಿಲ್ಲದೇ ಇದ್ದರೆ ( ಪಾನಿಪುರಿ ಕೊಳ್ಳುವವರು ಸ್ವಲ್ಪ ಹೊತ್ತು ಯಾರೂ ಬರದೇ ಇರುವಂತಹ ಸಂದರ್ಭದಲ್ಲಿ ಸಿಗರೇಟ್ ಸೇದುತ್ತಾನೆ ಅಥವಾ ಗುಟ್ಕಾ, ಪಾನ್ ಮಸಾಲವನ್ನು ತನ್ನ ಬಲಗೈನ 2 ಬೆರಳುಗಳಲ್ಲಿ ಬಾಯಿಗೆ ತುರುಕಿಕೊಳ್ಳುತ್ತಾನೆ.

ಆತನ ದೇಹದ ಬ್ಯಾಕ್ಟರಿಯ ಹಾಗೂ ವೈರಸ್ ರೋಗಾಣುಗಳ ಸೋಂಕು ನೇರವಾಗಿ ಮತ್ತು ಅಷ್ಟೇ ಸರಳವಾಗಿ ನಿಮಗೆ ತಗಲುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರತಿ ದಿನ ಎಡೆಬಿಡದೆ ಪಾನಿಪುರಿ ತಿನ್ನುವವರು ಕೇವಲ ಕೆಲವೇ ದಿನಗಳಲ್ಲಿ ವಾಂತಿ, ಭೇದಿ ಮತ್ತು ಹೆಪಟೈಟಸ್ ' ಎ ' ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.

ಪಾನಿಪುರಿ ಮಾರುವವರಿಗಿಂತ ಪಾನಿಪುರಿ ಮಾಡಲು ಹಿಟ್ಟು ತಯಾರಿ ಮಾಡಿಕೊಂಡು ಅದನ್ನು ಎಣ್ಣೆಯಲ್ಲಿ ಕರಿಯುವವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಕೆಲವೊಂದು ಕಡೆ ಪಾನಿಪುರಿಯ ಅಪಾರ ಪ್ರಮಾಣದ ಹಿಟ್ಟು ನಾದಲು ತಮ್ಮ ಕಾಲುಗಳ ಹಿಮ್ಮಡಿಯಿಂದ ತುಳಿಯುತ್ತಾರೆ ಎಂದು ಕೇಳಿ ಬಂದಿದೆ.

ಪಾನಿ ಪುರಿಗಳನ್ನು ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಅಷ್ಟು ದಪ್ಪನಾದ ಮೈದಾ ಹಿಟ್ಟು ಕಲಸಲು ಮತ್ತು ಹಿಟ್ಟು ಬಹಳಷ್ಟು ಗಟ್ಟಿ ಇರುವ ಕಾರಣ ಅದನ್ನು ಕೈಗಳಿಂದ ನಾದಲು ಸಾಧ್ಯವೇ ಇಲ್ಲ. ಹಾಗಾಗಿ ಕಾಲುಗಳ ಅವಶ್ಯಕತೆ ಅಗತ್ಯವಾಗುತ್ತದೆ. ( ಕೇವಲ ಪ್ರಮಾಣೀಕೃತ ಆಹಾರ ತಯಾರಿಕಾ ಕಂಪೆನಿಗಳಲ್ಲಿ ಮಾತ್ರ ಸ್ವಚ್ಛತೆಗಳ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ.

ನಿಮ್ಮ ಆರೋಗ್ಯವನ್ನು ಅತ್ಯಂತ ರಾಜಾರೋಷವಾಗಿ ಹಾಳು ಮಾಡುವ ಅನಾರೋಗ್ಯಕರ ಆಹಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ವಿಶೇಷವಾಗಿ ಶಾಲೆಗೆ ಹೋಗುವ, ಕಾಲೇಜಿಗೆ ಹೋಗುವ ಮಕ್ಕಳು ಹೆಚ್ಚಾಗಿ ಪಾನಿಪುರಿ ದಾಸ್ಯಕ್ಕೆ ಬಲಿಯಾಗುತ್ತಿದ್ದಾರೆ.

ಒಂದು ವೇಳೆ ಹಾಗೂ ಕೂಡ ನಿಮಗೆ ಪಾನಿಪುರಿ ತಿನ್ನಲೇಬೇಕು ಎನಿಸಿದರೆ, ಅದನ್ನು ಮಾಡುವ ವಿಧಾನವನ್ನು ಯುಟ್ಯೂಬ್ ನಲ್ಲಿ ನೋಡಿ ಕಲಿತು ನೀವೇ ತಯಾರು ಮಾಡಿ ಆರೋಗ್ಯಕರವಾಗಿ ಸೇವನೆ ಮಾಡಿ.