ಮೆದುಳು ಚುರುಕಾಗಲು ಸರಳ ಉಪಾಯಗಳು

ನಮ್ಮ ಮೆದುಳು ನಮ್ಮ ಇಡೀ ಕಾರ್ಯನಿರ್ವಹಣೆಗೆ ಸೂಪರ್ ಕಂಟ್ರೋಲರ್ ಇದ್ದಂತೆ. ಮೆದುಳು ಚುರುಕಾಗಿ ಕೆಲಸ ಮಾಡಿದರೆ ಮಾತ್ರ ನಾವು ಚುರುಕಾಗಿ ಕೆಲಸ ಮಾಡಲು ಸಾಧ್ಯ. ಮೆದುಳು ಚುರುಕಾಗಬೇಕಾದರೆ ಈ ಏಳು ಸರಳ ಕೆಲಸ ಮಾಡಬೇಕು.

Photo Credit: Social Media

ಪ್ರತಿನಿತ್ಯ ಹೊಸದನ್ನು ಕಲಿಯುತ್ತಿದ್ದರೆ, ನಿರಂತರ ಕಲಿಕೆಯಿಂದ ಮೆದುಳು ಚುರುಕಾಗುತ್ತದೆ

ಸ್ಪರ್ಶ, ರುಚಿ ಸೇರಿದಂತೆ ಪಂಚೇಂದ್ರಿಯಗಳಿಗೆ ಕೆಲಸ ಕೊಡುತ್ತಲೇ ಇದ್ದರೆ ಮೆದುಳು ಚುರುಕಾಗುತ್ತದೆ

ಮೆದುಳನ್ನು ಶಾಂತಗೊಳಿಸುವ ಯೋಗ ಅಥವಾ ಧ್ಯಾನವನ್ನು ನಿಯಮಿತವಾಗಿ ಮಾಡುತ್ತಿರಬೇಕು

ಅತಿಯಾಗಿ ಸಕ್ಕರೆ ಅಥವಾ ಸಕ್ಕರೆ ಅಂಶದ ಆಹಾರ ಸೇವನೆ ಮಾಡುವುದನ್ನು ಬಿಡಬೇಕು

ಮೆದುಳಿಗೆ ಸ್ಪೂರ್ತಿ ತುಂಬುದ ಏರೋಬಿಕ್ ಎಕ್ಸರ್ ಸೈಝ್ ನಿಯಮಿತವಾಗಿ ಮಾಡುತ್ತಿರಬೇಕು

ಸರಳ ಮತ್ತು ಮೆದುಳಿಗೆ ಕೆಲಸ ಕೊಡುವ ಲೆಕ್ಕಗಳನ್ನು ಆಗಾಗ ಮಾಡುತ್ತಲೇ ಇರಬೇಕು

ಕೆಲವೊಮ್ಮೆ ನಿರಂತರ ಯೋಚನೆಗಳಿಗೆ ಬ್ರೇಕ್ ಹಾಕಿ ಮೆದುಳಿಗೂ ಬ್ರೇಕ್ ಕೊಡಬೇಕಾಗುತ್ತದೆ