ಅಡುಗೆ ಮನೆಯಲ್ಲಿ ನಿತ್ಯವೂ ಬಳಸುವ ಪಾತ್ರೆ ನೀರ ಕಲೆ ಅಥವಾ ಒಲೆ ಮೇಲಿಟ್ಟು ಕಲೆಯಾಗುವುದು ಮತ್ತು ಹೊಳಪು ಕಳೆದುಕೊಳ್ಳುವುದು ಸಹಜ. ಅಡುಗೆ ಮನೆಯಲ್ಲಿ ಬಳಸುವ ಪಾತ್ರೆಗಳನ್ನು ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್.
Photo Credit: Social Media
ಅಡುಗೆ ಮನೆಯಲ್ಲಿ ಬಳಸುವ ಸ್ಟೀಲ್ ಪಾತ್ರೆಗೆ ಅಡುಗೆ ಸೋಡಾ ಹಾಕಿ ಉಜ್ಜಿದರೆ ಕ್ಲೀನ್ ಆಗುತ್ತದೆ
ಸ್ಟೀಲ್ ಪಾತ್ರೆಗೆ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಉಜ್ಜಿದರೆ ಕಲೆಯೂ ಮಾಯವಾಗುತ್ತದೆ
ತಾಮ್ರದ ಪಾತ್ರೆಯಾಗಿದ್ದರೆ ಸ್ವಲ್ಪ ಹುಣಸೆ ಹುಳಿ ರಸ ಬಳಸಿ ಉಜ್ಜಿದರೆ ಪಾತ್ರೆ ಬೆಳಗುತ್ತದೆ
ಅಲ್ಯುಮಿನಿಯಂ ಪಾತ್ರೆಯಾಗಿದ್ದರೆ ಕೊಂಚ ಬೂದಿ ಹಾಕಿಕೊಂಡು ಉಜ್ಜಿದರೆ ಹೊಳಪು ಬರುತ್ತದೆ
ಮರದ ಪಾತ್ರೆಯಾಗಿದ್ದಲ್ಲಿ ಬೆಚ್ಚಗಿನ ಸೋಪ್ ನೀರು ಮಾಡಿಕೊಂಡು ಅದರಲ್ಲಿ ನೆನೆಸಿ ತೊಳೆಯಿರಿ
ನಾನ್ ಸ್ಟಿಕ್ ಪಾತ್ರೆ ಅಥವಾ ತವಾ ಆಗಿದ್ದಲ್ಲಿ ಡಿಶ್ ವಾಶ್ ನಲ್ಲಿ ನೆನೆಸಿ ಮೆತ್ತನೆಯ ಸ್ಪಾಂಜ್ ನಲ್ಲಿ ತೊಳೆಯಿರಿ
ಗಾಜಿನ ಪಾತ್ರೆ ಅಥವಾ ಲೋಟ ಆಗಿದ್ದಲ್ಲಿ ನಿಂಬೆಯ ಹೋಳಿನಿಂದ ಚೆನ್ನಾಗಿ ಉಜ್ಜಿಗೆ ಹೊಳೆಯುತ್ತದೆ