ಈ ಸೌತ್ ನಟಿಯರ ಸಂಭಾವನೆ ನೀವು ಊಹಿಸಲೂ ಅಸಾಧ್ಯ

ಸ್ಟಾರ್ ನಾಯಕರಂತೆ, ನಾಯಕಿಯರಿಗೂ ಸೌತ್ ಸಿನಿಮಾದಲ್ಲಿ ಭಾರೀ ಬೇಡಿಕೆಯಿದೆ. ಸಂಭಾವನೆ ವಿಚಾರದಲ್ಲಿ ಇವರೂ ಈಗ ಕೋಟಿ ಕೋಟಿ ಜೇಬಿಗಿಳಿಸುತ್ತಿದ್ದಾರೆ. ಸೌತ್ ಸ್ಟಾರ್ ನಟಿಯರ ಪೈಕಿ ಟಾಪ್ ನಟಿಯರ ಸಂಭಾವನೆ ವಿವರ ನೋಡೋಣ.

credit: social media

ಇತ್ತೀಚೆಗೆ ಎಲ್ಲಾ ಸಿನಿಮಾಗಳಲ್ಲೂ ತಮನ್ನಾ ಭಾಟಿಯಾರದ್ದೇ ಹವಾ. ಸಿನಿಮಾ, ವೆಬ್ ಸೀರೀಸ್ ಮೂಲಕ ಸದ್ದು ಮಾಡುತ್ತಿರುವ ತಮನ್ನಾ ಒಂದು ಸಿನಿಮಾಗೆ 2-3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ನಯನತಾರಾ: ಜವಾನ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸೌತ್ ಸೂಪರ್ ಸ್ಟಾರ್ ನಟಿ ನಯನತಾರಾ ಒಂದು ಸಿನಿಮಾಗೆ 8-10 ಕೋಟಿ ವರೆಗೂ ಸಂಭಾವನೆ ಪಡೆಯುತ್ತಾರೆ.

ಅನುಷ್ಕಾ ಶೆಟ್ಟಿ ಒಂದು ಸಿನಿಮಾಗೆ 6 ಕೋಟಿವರೆಗೆ ಸಂಭಾವನೆ ಪಡೆಯುತ್ತಾರೆ.

ದಕ್ಷಿಣ ಭಾರತದ ಮತ್ತೊಬ್ಬ ಸೂಪರ್ ಸ್ಟಾರ್ ನಟಿ ಸಮಂತಾ ಋತು ಪ್ರಭು. ಅವರ ಸಂಭಾವನೆ ಒಂದು ಸಿನಿಮಾಗೆ 6-8 ಕೋಟಿ ರೂ.

ಟಾಲಿವುಡ್ ಬಳಿಕ ಬಾಲಿವುಡ್ ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಒಂದು ಸಿನಿಮಾಗೆ 3-4 ಕೋಟಿ ರೂ. ವರೆಗೆ ಸಂಭಾವನೆ ಪಡೆಯುತ್ತಾರೆ.

ಸಾಯಿ ಪಲ್ಲವಿ ಇತ್ತೀಚೆಗಷ್ಟೇ ತಮ್ಮ ಸಂಭಾವನೆಯಲ್ಲಿ ಶೇ.30 ರಷ್ಟು ಏರಿಕೆ ಮಾಡಿದ್ದು ಅವರು ಪ್ರತೀ ಸಿನಿಮಾಗೆ ಈಗ 3 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಿದ್ದಾರೆ.

ಅನಿಮಲ್ ಸಿನಿಮಾದಲ್ಲಿ ಬೆತ್ತಲಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸುಂದರಿ ತೃಪ್ತಿ ದಿಮ್ರಿ ಆ ಸಿನಿಮಾದ ಬೋಲ್ಡ್ ಪಾತ್ರಕ್ಕಾಗಿ 3-4 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.