ಚಳಿಗಾಲಕ್ಕೆ ಖಾರ ಖಾರವಾದ ಸೂಪ್ ರೆಸಿಪಿ

ಚಳಿಗಾಲದಲ್ಲಿ ಶೀತ, ಕೆಮ್ಮಿನಿಂದ ದೇಹವನ್ನು ಸಂರಕ್ಷಿಸಲು ದೇಹ ಬೆಚ್ಚಗಾಗಿಸುವಂತಹ ಆಹಾರ ಸೇವನೆ ಮಾಡಬೇಕು. ದೇಹ ಬೆಚ್ಚಗಾಗಿಸುವ ಖಾರ ಖಾರವಾದ ಸೂಪರ್ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram, Facebook

ಮೊದಲಿಗೆ ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ

ಇದಕ್ಕೆ ನಾಲ್ಕೈದು ಎಸಳು ಬೆಳ್ಳುಳ್ಳಿ, ಎರಡು ಪೀಸ್ ಶುಂಠಿ, ಈರುಳ್ಳಿ ಹಾಕಿ ಫ್ರೈ ಮಾಡಿ

ಸ್ವಲ್ಪ ಕಾಳುಮೆಣಸನ್ನೂ ಸೇರಿಸಿ ಬಣ್ಣ ಮಾಸುವವರೆಗೆ ಫ್ರೈ ಮಾಡಿ

ಈಗ ಇದಕ್ಕೆ ಹೆಚ್ಚಿದ ಟೊಮೆಟೊವನ್ನು, ಉಪ್ಪು ಸೇರಿಸಿ ಮತ್ತಷ್ಟು ಫ್ರೈ ಮಾಡಿಕೊಳ್ಳಿ

ಇದು ಮೆತ್ತಗಾಗುವಷ್ಟು ಬೆಂದ ಬಳಿಕ ಆರಲು ಬಿಟ್ಟು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ

ಈ ಪೇಸ್ಟ್ ನ್ನು ಸೋಸಿಕೊಂಡು ಸ್ವಲ್ಪ ಕಾರ್ನ್ ಫ್ಲೋರ್ ನೀರು ಸೇರಿಸಿ ಚೆನ್ನಾಗಿ ಕುದಿಸಿ

ಬಳಿಕ ಇದಕ್ಕೆ ತುಪ್ಪದಲ್ಲಿ ಕರಿದ ಬ್ರೆಡ್ ಚೂರು, ಪೆಪ್ಪರ್ ಪೌಡರ್ ಹಾಕಿ ಬಿಸಿ ಬಿಸಿ ಸೇವಿಸಿ