ಬೇಸಿಗೆ ಬಂತೆಂದರೆ ಸಾಕು ಮನೆಯಿಂದ ಹೊರಗೆ ಓಡಾಡಿದರೆ ಮುಖ, ಮೈ ಚರ್ಮದಲ್ಲಿ ಕಲೆಗಳುಂಟಾಗುವ ಆತಂಕ ಬಹುತೇಕರಿಗೆ ಕಾಡುತ್ತದೆ. ಒಂದು ವೇಳೆ ಬಿಸಿಲಿಗೆ ಚರ್ಮ ಕಪ್ಪಾಗಿದ್ದರೆ ನಾವು ಮನೆಯಲ್ಲಿಯೇ ಮಾಡಬಹುದಾದ ಸಿಂಪಲ್ ಪರಿಹಾರ ಇಲ್ಲಿದೆ.
credit: social media
ಬಿಸಿಲಿಗೆ ಮುಖ ಅಥವಾ ಚರ್ಮದಲ್ಲಿ ಕಪ್ಪು ಕಲೆಗಳಾದರೆ ಚರ್ಮ ಅಸಹ್ಯವಾಗಿ ಕಾಣುತ್ತದೆ
ಆಲೂಗಡ್ಡೆಯನ್ನು ಸ್ಲೈಸ್ ಮಾಡಿಕೊಂಡು ಕಲೆಯಾದ ಭಾಗಕ್ಕೆ ಚೆನ್ನಾಗಿ ಉಜ್ಜಿಕೊಳ್ಳಿ
ಪೈನಾಪಲ್ ಹಣ್ಣಿನ ಪಲ್ಪ್ ತಯಾರಿಸಿಕೊಂಡು ಕಲೆಯಾದ ಜಾಗಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ
ಫ್ರೆಶ್ ಕ್ರೀಂ ಜೊತೆಗೆ ಸ್ಟ್ರಾಬೆರಿಯನ್ನು ಚೆನ್ನಾಗಿ ಕಿವುಚಿಕೊಂಡು ಕಲೆಯಾದ ಜಾಗಕ್ಕೆ ಹಚ್ಚಿ
ಕಲೆಯಾದ ಜಾಗಕ್ಕೆ ನಿಂಬೆ ಹಣ್ಣನ್ನು ಬಳಸಿದರೆ ಕಲೆ ಮಾಯವಾಗುವುದಲ್ಲದೆ ಚರ್ಮ ಸಂರಕ್ಷಿಸುವುದು
ಅಲ್ಯುವೀರಾ ರಸವನ್ನು ಕಲೆಯಾದ ಜಾಗಕ್ಕೆ ಹಚ್ಚಿಕೊಂಡು ಕೆಲವು ಸಮಯ ಬಿಟ್ಟು ತೊಳೆದುಕೊಳ್ಳಿ
ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.