ಮೂಸಂಬಿ ಜ್ಯೂಸ್‌ನ ಪ್ರಯೋಜನಗಳು ಗೊತ್ತಾದ್ರೆ, ದಿನಾ ಕುಡಿಯುವಿರಿ!

ಲಿಂಬೆಯ ಜಾತಿಗೆ ಸೇರಿರುವಂತಹ ಹಣ್ಣುಗಳಲ್ಲಿ ಒಂದಾಗಿರುವಂತಹ ಮೂಸಂಬಿಯು ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ತಂಪು ನೀಡುವುದು ಮಾತ್ರವಲ್ಲದೆ, ಪಾರ್ಶ್ವವಾಯು ತಪ್ಪಿಸಿ, ದೇಹವನ್ನು ಹೈಡ್ರೇಟ್ ಆಗಿಡುತ್ತದೆ ಮತ್ತು ಗಂಟುಗಳು ಆರೋಗ್ಯ ಕಾಪಾಡುವುದರ ಜತೆಗೆ ವಿವಿಧ ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ.

photo credit social media

ಹೆಚ್ಚಾಗಿ ದಪ್ಪ ಸಿಪ್ಪೆಯನ್ನು ಹೊಂದಿರುವಂತಹ ಮೂಸಂಬಿಯಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಂತಹ ಹಲವಾರು ರೀತಿಯ ವಿಟಮಿನ್‍ಗಳು ಹಾಗೂ ಖನಿಜಾಂಶಗಳು ಇವೆ. ಇದರಿಂದಾಗಿ ಪ್ರತಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಮೂಸಂಬಿಯನ್ನು ಹಾಗೆ ತಿನ್ನಬಹುದು ಅಥವಾ ಅದರ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

ಮೂಸಂಬಿಯಲ್ಲಿ ಇರುವಂತಹ ಫ್ಲಾವನಾಯ್ಡ್‌ಗಳು ಜೀರ್ಣಕ್ರಿಯೆ ರಸ, ಆಮ್ಲ ಮತ್ತು ಪಿತ್ತರಸ ಸ್ರವಿಸುವಿಕೆ ಉತ್ತೇಜಿಸುವುದು. ಇದರ ಪರಿಣಾಮವಾಗಿ ಜೀರ್ಣಕ್ರಿಯೆ ಸುಧಾರಣೆ ಹಾಗುವುದು ಮತ್ತು ಕರುಳಿನ ಕ್ರಿಯೆಗಳು ಸರಾಗವಾಗುವುದು.

ವಿಟಮಿನ್ ಸಿ ಕೊರತೆಯಿಂದಾಗಿ ಸ್ಕರ್ವಿ ಕಾಣಿಸಿಕೊಳ್ಳುವುದು. ಒಸಡುಗಳು ಊದಿಕೊಳ್ಳುವುದು, ಶೀತ ಮತ್ತು ಜ್ವರ ಪದೇ ಪದೇ ಬರುವುದು ಮತ್ತು ಬಾಯಿ ಹಾಗೂ ನಾಲಗೆಯಲ್ಲಿ ಹುಣ್ಣು ಕಾಣಿಸಿಕೊಳ್ಳುವುದು. ರಕ್ತಸ್ರಾವವಾಗುವಂತಹ ಒಸಡುಗಳ ಸಮಸ್ಯೆಯನ್ನು ಮೂಸಂಬಿಯು ನಿವಾರಣೆ ಮಾಡುವುದು.

ಮೂಸಂಬಿ ರಸಕ್ಕೆ ಸ್ವಲ್ಪ ಕಪ್ಪು ಉಪ್ಪು ಹಾಕಿಕೊಂಡು ರಕ್ತಸ್ರಾವವಾಗುತ್ತಿರುವ ಒಸಡಿನ ಮೇಲೆ ಹಚ್ಚಿಕೊಳ್ಳಬೇಕು. ಬಾಯಿ ದುರ್ವಾಸನೆಯನ್ನು ಮೂಸಂಬಿ ಜ್ಯೂಸ್ ಸೇವನೆ ಅಥವಾ ಅದರ ಸಿಪ್ಪೆ ಜಗಿಯುವುದರಿಂದ ಕಡಿಮೆ ಮಾಡಬಹುದು.

ಇದರಲ್ಲಿ ಇರುವಂತಹ ಪ್ರಬಲ ಫ್ಲಾವನಾಯ್ಡ್ ಗುಣದಿಂದಾಗಿ ಇದು ಕ್ಯಾನ್ಸರ್ ವಿರೋಧಿ, ಆಂಟಿ ಆಕ್ಸಿಡೆಂಟ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ದೇಹವನ್ನು ನಿರ್ವಿಷಗೊಳಿಸುವ ಗುಣ ಹೊಂದಿದೆ. ಇದು ಸೋಂಕು, ಅಲ್ಸರ್ ಮತ್ತು ಗಾಯ ಗುಣಪಡಿಸುವುದು, ರಕ್ತಸಂಚಾರ ಸುಧಾರಿಸುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸಿ, ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುವುದು.

ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಮೂಸಂಬಿಯ ರಸವು ತುಂಬಾ ಪರಿಣಾಮವಾರಿ. ಮೂಸಂಬಿಯಲ್ಲಿ ಇರುವಂತಹ ನಂಜುನಿರೋಧಕ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳೇ ಇದಕ್ಕೆ ಕಾರಣವಾಗಿದೆ. ಇದರಲ್ಲಿನ ವಿಟಮಿನ್ ಗಳು ಕೂದಲನ್ನು ಬಲಪಡಿಸುವುದು ಮತ್ತು ತಲೆಹೊಟ್ಟು ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು.

ಅಪಾರ ಪ್ರಮಾಣದಲ್ಲಿ ಇರುವಂತಹ ಪೋಷಕಾಂಶಗಳು ಮತ್ತು ಒಳ್ಳೆಯ ಸುವಾಸನೆಯು ಮೂಸಂಬಿಯನ್ನು ಹಲವಾರು ಚರ್ಮದ ಆರೈಕೆಯ ಉತ್ಪನ್ನಗಳಲ್ಲಿ ಬಳಕೆ ಮಾಡುವಂತಾಗಿದೆ. ಇದು ಒಣ ಚರ್ಮ ಸುಧಾರಿಸುವುದು, ಚರ್ಮದ ಬಣ್ಣ ಮತ್ತು ಕಾಂತಿ ಹೆಚ್ಚಿಸುವುದು ಹಾಗೂ ನೈಸರ್ಗಿಕ ಮೊಶ್ಚಿರೈಸರ್ ಆಗಿ ಕೆಲಸ ಮಾಡುವುದು.