ತಲೆನೋವು ಪದೇ ಪದೇ ಕಾಡುತ್ತಿದ್ದರೆ ಅದು ಕೇವಲ ತಲೆನೋವಾಗಿರುವುದಿಲ್ಲ. ಅದು ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು. ಬ್ರೈನ್ ಟ್ಯೂಮರ್ ಎಂಬ ಗಂಭೀರ ಕಾಯಿಲೆಯಿದ್ದರೂ ಪದೇ ಪದೇ ತಲೆನೋವು ಕಾಡುತ್ತದೆ. ಬ್ರೈನ್ ಟ್ಯೂಮರ್ ನ ಇತರೆ ಲಕ್ಷಣಗಳು ಯಾವುವು
Photo Credit: Social Media
ಪದೇ ಪದೇ ಅಸಹನೀಯ ತಲೆನೋವು ಕಾಡುತ್ತಿದ್ದರೆ ಅದು ಬ್ರೈನ್ ಟ್ಯೂಮರ್ ನ ಪ್ರಮುಖ ಲಕ್ಷಣವಾಗಿರಬಹುದು
ತಲೆಗೆ ಯಾರೋ ಸೂಜಿಯಿಂದ ಚುಚ್ಚಿದಂತಾಗುವುದು, ಹಿಡಿದಂತಾಗುವುದು ಇತ್ಯಾದಿ ಬ್ರೈನ್ ಟ್ಯೂಮರ್ ಲಕ್ಷಣಗಳು
ಸ್ಮರಣ ಶಕ್ತಿ ಕುಂಠಿತವಾಗುವುದು, ಯೋಚನಾ ಶಕ್ತಿ ಕುಂಠಿತವಾಗುವುದು, ಮಾತು ತೊದಲುವುದು ಇದರ ಲಕ್ಷಣಗಳು
ದೇಹದ ಒಂದು ಭಾಗ ಪಾರ್ಶ್ವವಾಯುವಿಗೆ ತುತ್ತಾಗುವುದು, ಒಂದು ರೀತಿಯಲ್ಲಿ ದುರ್ಬಲವಾದಂತಾಗುವುದು
ಕೆಲವರಲ್ಲಿ ಕಿವಿ ಕೇಳಿಸದಂತಾಗುವುದು ಅಥವಾ ಶ್ರವಣ ದೋಷಗಳೂ ಕಂಡುಬರುವ ಸಾಧ್ಯತೆಯಿದೆ.
ಕಿವಿ ಜೊತೆಗೆ ಕಣ್ಣಿನ ದೃಷ್ಟಿ ಮಂದವಾಗುವುದೂ ಬ್ರೈನ್ ಟ್ಯೂಮರ್ ರೋಗದ ಲಕ್ಷಣವಾಗಿರಬಹುದು
ದೇಹದ ಸಮತೋಲನ ತಪ್ಪುವುದು, ಸುಸ್ತಾಗುವಿಕೆ, ತಲೆ ತಿರುಗಿದಂತಾಗುವುದು ಬ್ರೈನ್ ಟ್ಯೂಮರ್ ಲಕ್ಷಣಗಳು