ಕ್ಯಾಲ್ಶಿಯಂ ಕೊರತೆಯಾದ್ರೆ ಏನೇನಾಗುತ್ತದೆ

ದೇಹದ ಆರೋಗ್ಯಕ್ಕೆ ಕ್ಯಾಲ್ಶಿಯಂ ಅಂಶ ಅತ್ಯಗತ್ಯ. ಆದರೆ ಕ್ಯಾಲ್ಸಿಯಂ ಕೊರತೆಯಿಂದ ನಾವು ಅನೇಕ ಆರೋಗ್ಯ ಸಮಸ್ಯೆ ಎದುರಿಸಬಹುದು. ಅದರಲ್ಲೂ ಮಹಿಳೆಯರಲ್ಲಿ ಒಂದು ವಯಸ್ಸು ದಾಟಿದ ಮೇಲೆ ಕ್ಯಾಲ್ಶಿಯಂ ಕೊರತೆ ಕಂಡುಬರುತ್ತದೆ.

Photo Credit: Social Media

ಕ್ಯಾಲ್ಶಿಯಂ ಅಂಶ ಕಡಿಮೆಯಾದಾಗ ಎಲುಬುಗಳ ಮುರಿತ ಅಥವಾ ಇತರೆ ಸಮಸ್ಯೆಗಳು ಕಂಡುಬರಬುದು

ಕ್ಯಾಲ್ಶಿಯಂ ಕೊರತೆ ಚರ್ಮದ ಮೇಲೆ ಪರಿಣಾಮ ಬೀರಿ ಚರ್ಮ ಒಣಗಿದಂತೆ ಕಂಡುಬರಬಹುದು

ಕ್ಯಾಲ್ಶಿಯಂ ಅಂಶ ಕೊರತೆಯಿಂದಾಗಿ ಕೂದಲುಗಳ ಅಸಹಜ ಉದುರುವಿಕೆ ಸಮಸ್ಯೆ ಎದುರಾಗಬಹುದು

ಮಹಿಳೆಯರು ಕ್ಯಾಲ್ಶಿಯಂ ಕೊರತೆಯಿಂದಾಗಿ ಋತುಚಕ್ರದ ವೇಳೆ ತೀವ್ರ ನೋವು, ನಿಶ್ಯಕ್ತಿಗೊಳಗಾಗಬಹುದು

ಕ್ಯಾಲ್ಶಿಯಂ ಕೊರತೆಯಾದಾಗ ಹಲ್ಲುಗಳು ಬೇಗನೇ ಹುಳುಕಾಗಿ ಹಲ್ಲು ನೋವಿನ ಸಮಸ್ಯೆ ಬರಬಹುದು

ಕ್ಯಾಲ್ಶಿಯಂ ಕೊರತೆಯಿಂದಾಗಿ ಮಾಂಸಖಂಡಗಳು ದುರ್ಬಲವಾದಂತಾಗಿ ಬೇಗನೇ ಸುಸ್ತಾಗಬಹುದು

ಕ್ಯಾಲ್ಶಿಯಂ ಕೊರತೆಯಿಂದ ಉಗುರುಗಳು ಸರಿಯಾಗಿ ಬೆಳವಣಿಗೆಯಾಗದೇ ಇರಬಹುದು