ಪುರುಷ ಮತ್ತು ಮಹಿಳೆಯರಲ್ಲಿ ಹೃದಯಾಘಾತಕ್ಕೆ ಮುನ್ನ ಕಂಡುಬರುವ ಲಕ್ಷಣಗಳು ವಿಭಿನ್ನವಾಗಿರುತ್ತದೆ. ಮಹಿಳೆಯರಲ್ಲಿ ಹೃದಯಾಘಾತದ ಸೂಚನೆ ನೀಡುವ ಕೆಲವು ಪ್ರತ್ಯೇಕ ಲಕ್ಷಣಗಳಿದ್ದು ಅವು ಯಾವುವು ನೋಡೋಣ.
credit: social media
ಪುರುಷ ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ವ್ಯತ್ಯಸ್ತವಾಗಿರುತ್ತದೆ
ಮಹಿಳೆಯರಿಗೆ ಹೃದಯಾಘಾತಕ್ಕೆ ಮುನ್ನ ಉಸಿರಾಡಲು ಕಷ್ಟವಾಗುವ ಅಥವಾ ಉಸಿರುಗಟ್ಟಿದಂತಾಗಬಹುದು
ಮಹಿಳೆಯರಲ್ಲಿ ತಲೆಸುತ್ತಿದಂತಾಗುವುದು ಕೂಡಾ ಹೃದಯಾಘಾತದ ಲಕ್ಷಣಗಳಲ್ಲಿ ಒಂದಾಗಿದೆ.
ತೀರಾ ಸುಸ್ತಾಗುವುದು, ತಲೆಸುತ್ತಿ ಬೀಳುವಂತಾಗುವುದು ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು
ತೀರಾ ತಂಪಾದ ಬೆವರನ್ನು ಹೊರ ಹಾಕುವ ವಿಚಿತ್ರ ಲಕ್ಷಣಗಳು ಮಹಿಳೆಯರಲ್ಲಿ ಕಂಡುಬರಬಹುದು
ಹೃದಯಾಘಾತಕ್ಕೆ ಮುನ್ನ ಕೈ, ಬೆನ್ನು, ಕುತ್ತಿಗೆ, ದವಡೆ ಮತ್ತು ಹೊಟ್ಟೆಯಲ್ಲಿ ನೋವು ಕಂಡುಬರಬಹುದು
ಇಂತಹ ಲಕ್ಷಣ ಕಂಡುಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.