ಇದು ಬಾಯಿಯ ಕ್ಯಾನ್ಸರ್ ಲಕ್ಷಣಗಳು

ವಿವಿಧ ರೀತಿಯ ಕ್ಯಾನ್ಸರ್ ಗಳಲ್ಲಿ ಬಾಯಿಯ ಕ್ಯಾನ್ಸರ್ ಕೂಡಾ ಒಂದು. ಬಾಯಿಯ ಕ್ಯಾನ್ಸರ್ ನಿಂದ ಜಗಿದು ನುಂಗುವುದೂ ಕಷ್ಟವಾಗಬಹುದು. ಇದು ಮಾರಣಾಂತಿಕವಾಗಬಹುದು. ಹಾಗಿದ್ದರೆ ಬಾಯಿಯಕ್ಯಾನ್ಸರ್ ನ ಲಕ್ಷಣವೇನು?

credit: social media

ಬಾಯಿಯ ಭಾಗಗಳಾದ ತುಟಿ, ನಾಲಿಗೆ, ಗಂಟಲು, ಒಸಡಿನಲ್ಲಿ ಬಾಯಿಯ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.

ತುಟಿ ಅಥವಾ ಬಾಯಿಯಲ್ಲಿ ಹುಣ್ಣಾಗುವುದು ಮತ್ತು ಅದು ಬೇಗನೇ ವಾಸಿಯಾಗದೇ ಇರುವುದು

ಬಾಯಿಯಲ್ಲಿ ಬಾಯಿ ಹುಣ್ಣಿನಂತೇ ಕಾಣುವ ಬಿಳಿ ಅಥವಾ ಕೆಂಪು ತೇಪೆ ಆಗುವುದು.

ಬಾಯಿಯಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು ಮತ್ತು ಅದು ನೋವಿನಿಂದ ಕೂಡಿರುವುದು.

ಕಿವಿಯಲ್ಲಿ ನೋವು ಉಂಟಾಗುವುದು ಮತ್ತು ಜಗಿದು ನುಂಗಲು ಕಷ್ಟವಾಗುವುದು.

ಮಾತು, ಧ್ವನಿಯಲ್ಲಿ ಬದಲಾವಣೆಯಾಗುವುದನ್ನು ನಾವು ಗಮನಿಸಬಹುದು.

ಹಲ್ಲು ನೋವು, ವಸಡಿನಲ್ಲಿ ನೋವು ಅಥವಾ ರಕ್ತ ಬರುವುದು ಇದರ ಲಕ್ಷಣಗಳಾಗಬಹುದು.