ತಮಿಳು ಸ್ಟೈಲ್ ನಲ್ಲಿ ಆಲೂಗಡ್ಡೆ ಫ್ರೈ ಮಾಡಿ

ತಮಿಳುನಾಡು ಮಸಾಲಭರಿತ ಆಹಾರಗಳಿಗೆ ಫೇಮಸ್. ಖಾರ ಖಾರವಾಗಿ ತಮಿಳುನಾಡು ಸ್ಟೈಲ್ ನಲ್ಲಿ ಆಲೂಗಡ್ಡೆ ಫ್ರೈ ಮಾಡುವುದು ಹೇಗೆ ನೋಡೋಣ. ಇದನ್ನು ದೋಸೆ, ಚಪಾತಿ, ಅನ್ನಕ್ಕೂ ಕಲಸಿ ತಿನ್ನಬಹುದು.

Photo Credit: Instagram

ಮೊದಲಿಗೆ ಆಲೂಗಡ್ಡೆಯನ್ನು ಬಿಲ್ಲೆಗಳಾಗಿ ಕಟ್ ಮಾಡಿ ಬಿಸಿ ನೀರಿಗೆ ಹಾಕಿ ತೆಗೆಯಿರಿ

ಈಗ ಒಂದು ಪ್ಯಾನ್ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ

ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಇಂಗು, ಕರಿಬೇವು ಹಾಕಿ ಫ್ರೈ ಮಾಡಿ

ಈಗ ನೀರಿನಿಂದ ತೆಗೆದಿಟ್ಟಿರುವ ಆಲೂಗಡ್ಡೆ ಹೋಳುಗಳನ್ನು ಪ್ಯಾನ್ ಗೆ ಹಾಕಿ ಫ್ರೈ ಮಾಡಿ

ಇದು ಎಣ್ಣೆಯನ್ನು ಚೆನ್ನಾಗಿ ಫ್ರೈ ಆಗುವವರೆಗೆ ಕೈಯಾಡಿಸುತ್ತಾ ಇರಬೇಕು

ಬಳಿಕ ಇದಕ್ಕೆ ಸ್ವಲ್ಪ ಅಚ್ಚ ಖಾರದ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಕೈಯಾಡಿಸಿ

ಇದೆಲ್ಲವೂ ಮಿಕ್ಸ್ ಆಗುವಷ್ಟು ಕೈಯಾಡಿಸಿದರೆ ಆಲೂಗಡ್ಡೆ ಫ್ರೈ ರೆಡಿಯಾಗುತ್ತದೆ