ದೇವಸ್ಥಾನ ಶೈಲಿಯಲ್ಲಿ ಚೀನಿಕಾಯಿ ಸಾಂಬಾರ್ ರೆಸಿಪಿ

ದಕ್ಷಿಣ ಕನ್ನಡ ಜಿಲ್ಲೆಗಳ ದೇವಾಲಯಗಳಿಗೆ ಹೋದರೆ ಚೀನಿಕಾಯಿ ಅಥವಾ ಸಿಹಿಕುಂಬಳ ಬಳಸಿ ರುಚಿಕರ ಸಾಂಬಾರ್ ಮಾಡ್ತಾರೆ. ಇದನ್ನು ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಚೀನಿಕಾಯಿ ಹೋಳು ಮಾಡಿಕೊಂಡು ಒಂದು ಪಾತ್ರೆಗೆ ಹಾಕಿ

ಇದಕ್ಕೆ ಅರಿಶಿನ ಹಾಕಿ ಚೆನ್ನಾಗಿ ಬೇಯಲು ಬಿಡಿ

ಬಾಣಲೆಗೆ ಧನಿಯಾ, ಜೀರಿಗೆ, ಉದ್ದಿನ ಬೇಳೆ, ಕಡ್ಲೆಬೇಳೆ, ಮೆಂತೆ, ಮೆಣಸು ಹಾಕಿ

ಇವುಗಳಿಗೆ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ ಕೊನೆಯಲ್ಲಿ ಕರಿಬೇವು, ಕಾಯಿತುರಿ ಸೇರಿಸಿ

ಇವುಗಳನ್ನು ಒಂದು ರೌಂಡ್ ಫ್ರೈ ಮಾಡಿಕೊಂಡ ಬಳಿಕ ನುಣ್ಣಗೆ ರುಬ್ಬಿ

ಈಗ ಬೇಯಲು ಇಟ್ಟಿರುವ ಚೀನಿಕಾಯಿಗೆ ಮಸಾಲೆ ಸೇರಿಸಿ

ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ರಸ, ಬೆಲ್ಲ ಸೇರಿಸಿ ಕುದಿಸಿ

ಇದಕ್ಕೆ ಕುದಿದ ಬಳಿಕ ಇದಕ್ಕೆ ಒಗ್ಗರಣೆ ಕೊಟ್ಟರೆ ಸಾಂಬಾರ್ ರೆಡಿ