ಯುಟಿಐ ಅಂದರೆ ಮೂತ್ರ ಉರಿ ಸಮಸ್ಯೆ ಬಂದರೆ ಅಸಾಧ್ಯವಾದ ನೋವು ಕಂಡು ಬರುವುದು. ಈ ಮೂತ್ರ ಉರಿಗೆ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಗರ್ಭಕೋಶ, ಕಿಡ್ನಿಗೆ ಕೂಡ ತೊಂದರೆ ಉಂಟಾಗುವುದು.
photo credit social media
ಮೂತ್ರ ವಿಸರ್ಜಿಸುವಾಗ ಉರಿಯುವುದು, ಸುಡುವಂತೆ ಅನುಭವವಾಗುವುದು ಒಟ್ಟಿನಲ್ಲಿ ಪ್ರಾಣವೇ ಹೋದಂತಾದ ಅನುಭವ. ಈ ಸಮಸ್ಯೆಯನ್ನು ಪ್ರತಿಯೊಬ್ಬ ಪುರುಷ-ಮಹಿಳೆಯರು ಜೀವನದಲ್ಲಿ ಒಮ್ಮೆಯಾದರೂ ಎದುರಿಸುತ್ತಾರೆ ಅಥವಾ ಎದುರಿಸದೆಯೂ ಇರಬಹುದು.
ಜ್ವರ ಬಂದರೆ ಒಂದೈದು ನಿಮಿಷ, ಒಂದು ದಿನ ತಡೆದು ವೈದ್ಯರನ್ನು ಸಂಪರ್ಕಿಸಬಹುದೇನೋ, ಆದರೆ ಪದೇ ಪದೇ ಬರುವ ಮೂತ್ರವನ್ನು ವಿಸರ್ಜಿಸುವಾಗ ಆಗುವ ನೋವನ್ನು ನಾವು ದೀರ್ಘಕಾಲ ಹಿಡಿದಿಡಲು ಸಾಧ್ಯವೇ ಇಲ್ಲ. ಅಂದಹಾಗೆ ಈ ಎಲ್ಲಾ ಲಕ್ಷಣಗಳು ನಿಮ್ಮಲ್ಲಿ ಕಂಡುಬರುತ್ತಿದೆ ಎಂದರೆ ಮೂತ್ರನಾಳದಲ್ಲಿ ಸೋಂಕಾಗಿದೆ (ಯುಟಿಐ) ಎಂದರ್ಥ. ಈ ಸೋಂಕನ್ನು ಹಗುರವಾಗಿ ಪರಿಗಣಿಸಿದರೆ ಮೂತ್ರಪಿಂಡ, ಮೂತ್ರಕೋಶದ ಮೇಲೆಯೇ ಪರಿಣಾಮ ಬೀರುತ್ತದೆ.
ಜೀರ್ಣಾಂಗವ್ಯೂಹದಲ್ಲಿ ವಾಸಿಸುವ ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಾದಿಂದ ಈ ಸೋಂಕು ಉಂಟಾಗುತ್ತದೆ. ಅಂದರೆ ಅದು ಮೂತ್ರನಾಳಕ್ಕೆ ಹೋಗುವಾಗ ಸೋಂಕನ್ನು ಉಂಟುಮಾಡುತ್ತದೆ.
ಗುದದ್ವಾರದ (ಇದು ಮೂತ್ರನಾಳಕ್ಕೆ ಬಹಳ ಹತ್ತಿರವಿದೆ) ಮೂಲಕ ಈ ಬ್ಯಾಕ್ಟೀರಿಯಾ ಮೂತ್ರನಾಳಕ್ಕೆ ಪ್ರವೇಶಿಸುವುದು ಸುಲಭ. ಅದಕ್ಕಾಗಿಯೇ ಈ ಬ್ಯಾಕ್ಟೀರಿಯಾಗಳು ಮೂತ್ರನಾಳದ ಸಂಪರ್ಕಕ್ಕೆ ಬರದಂತೆ ತಪ್ಪಿಸಲು ಮುಂಭಾಗ-ಹಿಂಭಾಗದ ಸ್ವಚ್ಛತೆ, ಪ್ರಾಮುಖ್ಯತೆ ಬಗ್ಗೆ ವೈದ್ಯರು ಯಾವಾಗಲೂ ಒತ್ತಿ ಹೇಳುತ್ತಿರುತ್ತಾರೆ.
ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿದ್ದರೂ, ಯುಟಿಐ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಏಕೆಂದರೆ ಅವರ ಮೂತ್ರನಾಳವು ಚಿಕ್ಕದಾಗಿದೆ ಮತ್ತು ಗುದದ್ವಾರಕ್ಕೆ ಹತ್ತಿರದಲ್ಲಿದೆ. ಯುಟಿಐಗೆ ಆಂಟಿಬಯಾಟಿಕ್ ಮೂಲಕ ಚಿಕಿತ್ಸೆ ನೀಡಬಹುದು.
ಬ್ಯಾಕ್ಟೀರಿಯಾಗಳು ಮತ್ತೆ ಹೆಚ್ಚು ಚೇತರಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇದಕ್ಕೆ ನೈಸರ್ಗಿಕ, ಸುರಕ್ಷಿತ ಪರ್ಯಾಯ ವ್ಯವಸ್ಥೆಯನ್ನು ಕಂಡುಹಿಡಿಯುವ ಅವಶ್ಯಕತೆಯಿದೆ.
ಯುಟಿಐ ಚಿಕಿತ್ಸೆಯ ಕುರಿತು ಪರಿಹಾರಗಳ ಬಗ್ಗೆ ಮಾತನಾಡುವಾಗ ನೆನಪಿಗೆ ಬರುವ ಒಂದು ಅಂಶವೆಂದರೆ ಕೊತ್ತಂಬರಿ (ಧನಿಯಾ) ಬೀಜ. ಹೌದು, ಆಯುರ್ವೇದದ ಪ್ರಕಾರ, ಕೊತ್ತಂಬರಿ ದೇಹವನ್ನು ತಂಪಾಗಿರುಸುತ್ತದೆ.