ವಿಶ್ವ ಸಂಗೀತ ದಿನ: ಯಾವ ರಾಗ ಯಾವ ರೋಗಕ್ಕೆ ಮದ್ದು

ಸಂಗೀತ ಎನ್ನುವುದು ಯಾವುದೇ ಶೈಲಿಯಾಗಿರಲಿ, ಅದು ಮನಸ್ಸಿಗೆ ಮುದ ನೀಡುವುದರ ಜೊತೆಗೆ ದೈಹಿಕವಾಗಿಯೂ ನಮ್ಮಲ್ಲಿ ಹೊಸ ಉತ್ಸಾಹ ತುಂಬುತ್ತದೆ. ಕೆಲವೊಂದು ವಿಶೇಷ ರಾಗಗಳು ಕೆಲವೊಂದು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.

Photo Credit: Social Media

ನಮ್ಮ ಪ್ರಾಚೀನ ನಂಬಿಕೆಯ ಪ್ರಕಾರ ವೃಂದಾವನಿ ಸಾರಂಗ ರಾಗದಿಂದ ಪಿತ್ತದ ಸಮಸ್ಯೆ ನಿವಾರಣೆಯಾಗುವುದು

ಉಬ್ಬಸ ಅಥವಾ ಅಸ್ತಮಾ ಇರುವವರು ಮಿಯಾ ಮಲ್ಹಾರ ರಾಗವನ್ನು ಆಲಿಸಬೇಕು

ಬೆನ್ನು ನೋವು ಇರುವವರು ಮಾರು ಬಿಹಾಗ ರಾಗವನ್ನು ಅಭ್ಯಾಸ ಮಾಡಬೇಕು

ಮೈಗ್ರೇನ್ ಅಥವಾ ತಲೆನೋವು ಸಮಸ್ಯೆಯಿದ್ದರೆ ದರ್ಬಾರಿ ಕಾನಡಾ ರಾಗವನ್ನು ಆಲಿಸಬೇಕು

ಖಿನ್ನತೆ ಸಮಸ್ಯೆಯಿರುವವರು ಯಮನ್ ಕಲ್ಯಾಣಿ ರಾಗವನ್ನು ಹೆಚ್ಚು ಹೆಚ್ಚು ಆಲಿಸುತ್ತಿರಿ

ರಕ್ತದೊತ್ತಡ ನಿಯಂತ್ರಣಕ್ಕೆ ಯಮನ್ ಕಲ್ಯಾಣಿ, ಭಾಗೇಶ್ರೀ ರಾಗವನ್ನು ಆಲಿಸುತ್ತಿರಬೇಕು

ಕೋಪ ಶಮನಕ್ಕೆ ಮಲ್ಹಾರ, ಲಲಿತಾ, ಕಾಪಿ ಅಥವಾ ಪುನ್ನಗವರಾಳಿ ರಾಗ ಆಲಿಸುವುದು ಸೂಕ್ತ