ಬಿಪಿ ಲೋ ಅದ ತಕ್ಷಣ ಮಾಡಬೇಕಿರುವುದು

ಅಧಿಕ ರಕ್ತದೊತ್ತಡ ಎನ್ನುವುದು ಎಷ್ಟು ಅಪಾಯಕಾರಿಯೋ, ಕಡಿಮೆಯಾದರೂ ಅಷ್ಟೇ ಅಪಾಯಕಾರಿ. ಬಿಪಿ ಲೋ ಸಮಸ್ಯೆ ಇಂದು ಅನೇಕರಲ್ಲಿ ಕಾಡುತ್ತಿದೆ. ಹೀಗಾಗಿ ಬಿಪಿ ಲೋ ಆದ ತಕ್ಷಣ ನಾವು ಏನು ಮಾಡಬೇಕು ನೋಡೋಣ.

credit: social media

ರಕ್ತದೊತ್ತಡ ಕಡಿಮೆಯಾದಾಗ ದೇಹದ ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುವ ಅಪಾಯವಿದೆ.

ರಕ್ತದೊತ್ತಡ 90 ರಿಂದ 60 ಎಂಎಂ ಎಚ್ ಜಿಗಿಂತ ಕಡಿಮೆ ಇದ್ದರೆ ಕಡಿಮೆ ರಕ್ತದೊತ್ತಡ ಎನ್ನಬಹುದು

ರಕ್ತದೊತ್ತಡ ಕಡಿಮೆಯಾಗಿದೆ ಎನಿಸಿದ ತಕ್ಷಣ ಚೆನ್ನಾಗಿ ನೀರು ಅಥವಾ ಪಾನೀಯ ಸೇವಿಸಿ

ರಕ್ತದೊತ್ತಡ ಕಡಿಮೆ ಇರುವವರು ಆಗಾಗ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿರಬೇಕು

ತಲೆನೋವು, ವಾಕರಿಕೆ, ಸುಸ್ತಾಗುವುದು ಆಗುತ್ತಿದ್ದರೆ ತಕ್ಷಣವೇ ಬಿಪಿ ಚೆಕ್ ಮಾಡಿಕೊಳ್ಳಿ

ಲೋ ಬಿಪಿ ಲಕ್ಷಣ ಕಾಣಿಸಿಕೊಂಡ ತಕ್ಷಣ ಸ್ವಲ್ಪ ಉಪ್ಪು ಅಥವಾ ಉಪ್ಪಿನ ನೀರು ಸೇವಿಸಿ

ಕಾಲುಗಳನ್ನು ಗುಣಾಕಾರದಲ್ಲಿಟ್ಟು ಕುಳಿತುಕೊಳ್ಳಿ, ಇದರಿಂದ ರಕ್ತದೊತ್ತಡ ಏರಿಕೆಯಾಗುತ್ತದೆ