ಔಷಧೀಯ ಗುಣಗಳ ಖಜಾನೆ ಈ ದಾಳಿಂಬೆ ಹಣ್ಣು

ಸಾಕಷ್ಟು ಆರೋಗ್ಯ ತಜ್ಞರು ಗ್ರೀನ್ ಟೀ ಮತ್ತು ದಾಳಿಂಬೆ ಹಣ್ಣು ಎರಡು ಸಹ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಅಂಶಗಳ ವಿಚಾರವನ್ನು ನೋಡುವುದಾದರೆ, ನಾವು ಆಯ್ಕೆ ಮಾಡಿಕೊಳ್ಳಬಹುದಾದ ಆಹಾರ ಪದಾರ್ಥಗಳ ಕಡೆಗೆ ನಾವು ಗಮನವಹಿಸಬೇಕು.

photo credit social media

ಚಳಿಗಾಲದಲ್ಲಿ ದಾಳಿಂಬೆ ಹಣ್ಣು ಹೆಚ್ಚಾಗಿ ಎಲ್ಲಾ ಕಡೆ ಸಿಗುತ್ತದೆ. ಇನ್ನು ಗ್ರೀನ್ ಟೀ ನಾವು ಯಾವಾಗ ಬೇಕೆಂದರೂ ನಮ್ಮ ಮನೆಯಲ್ಲಿ ತಯಾರು ಮಾಡಿಕೊಂಡು ಕುಡಿಯಬಹುದು. ಆದರೆ ದೇಹಕ್ಕೆ ಯಾವುದು ಹೆಚ್ಚು ಆರೋಗ್ಯಕರ ಎಂಬುದನ್ನು ತಿಳಿದುಕೊಳ್ಳಬೇಕು.

ಚಳಿಗಾಲದಲ್ಲಿ ಸಿಗುವಂತಹ ಬಹುತೇಕ ಹಣ್ಣು ಮತ್ತು ತರಕಾರಿಗಳು ನಮ್ಮ ಆರೋಗ್ಯದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರುತ್ತವೆ. ಇದರಲ್ಲಿ ಸಿಹಿಯಾದ ಕಿತ್ತಳೆ ಹಣ್ಣು, ದಾಳಿಂಬೆ ಹಣ್ಣು, ಸೇಬು ಹಣ್ಣು ಎಲ್ಲವೂ ಕೂಡ ನಮ್ಮ ಆರೋಗ್ಯದ ಮೇಲೆ ತಮ್ಮದೇ ಆದ ಪ್ರಭಾವವನ್ನು ಹೊಂದಿವೆ.

ಪೌಷ್ಟಿಕ ಸತ್ವಗಳು ಹೆಚ್ಚಾಗಿರುವ ಹಣ್ಣು-ತರಕಾರಿಗಳನ್ನು ನಾವು ಈ ಸಮಯದಲ್ಲಿ ಸೇವನೆ ಮಾಡಿ ನಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬಹುದು. ದಾಳಿಂಬೆ ಬೀಜಗಳು ತಮ್ಮಲ್ಲಿ ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಒಳಗೊಂಡಿವೆ.

ಇದು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡ ಹಣ್ಣು ಎಂದು ಹೇಳಬಹುದು. ಅಷ್ಟೇ ಅಲ್ಲದೆ ಇದರಲ್ಲಿ ನೀರಿನ ಅಂಶ ಕೂಡ ಹೆಚ್ಚಾಗಿರುವುದರಿಂದ, ಗ್ರೀನ್ ಟೀ ಗೆ ಹೋಲಿಸಿದರೆ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಒಂದು ಸಂಶೋಧನೆ ಹೇಳುವ ಪ್ರಕಾರ, ಗ್ರೀನ್ ಟೀ ಗೆ ಹೋಲಿಸಿದರೆ, ದಾಳಿಂಬೆ ಹಣ್ಣಿನ ಬೀಜಗಳಲ್ಲಿ ಅಪಾರ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಯಾವ ಕಾರಣಕ್ಕೆ ನಾವು ದಾಳಿಂಬೆ ಹಣ್ಣನ್ನು ಸೇವನೆ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ದಾಳಿಂಬೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶಗಳು ಕಂಡು ಬರುತ್ತವೆ ಮತ್ತು ಇವುಗಳು ನಮ್ಮ ಕರುಳಿನ ಆರೋಗ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಇವುಗಳ ಪಾತ್ರ ತುಂಬಾ ದೊಡ್ಡದಿರುತ್ತದೆ.

ದಾಳಿಂಬೆ ಹಣ್ಣಿನ ಸೇವನೆ ಮಾಡುವುದರಿಂದ ಅದರಲ್ಲಿರುವ ಫ್ಲೇವನಾಯ್ಡ್ ಅಂಶಗಳು ನಮ್ಮ ಮೂಳೆಗಳಿಗೆ ಪ್ರಭಾವಶಾಲಿ ಪರಿಹಾರವಾಗಿ ಕೆಲಸ ಮಾಡಿ ಮೂಳೆಗಳ ಆರೋಗ್ಯವನ್ನು ಉತ್ತಮಪಡಿಸುತ್ತದೆ.