ಮಧುಮೇಹ, ರಕ್ತದೊತ್ತಡವಿರುವವರು ಔಷಧೀಯ ಗುಣ ಹೊಂದಿರುವ ಸೊಪ್ಪು ಸೇವಿಸಿ

ಮಧುಮೇಹ ಇರುವವರು, ರಕ್ತದ ಒತ್ತಡ ಇರುವವರು, ಹುಳುಕು ಹಲ್ಲು, ಕರುಳಿನ ಸಮಸ್ಯೆ ಹೊಂದಿರುವವರು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಿಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.ಬೇವಿನ ಸೊಪ್ಪು ತನ್ನ ಕಹಿಯ ಸ್ವಭಾವದಿಂದ ಇಂದು ಹಲವಾರು ಔಷಧೀಯ ಉತ್ಪನ್ನ ತಯಾರಿಕಾ ಕಂಪನಿಗಳಲ್ಲಿ ಹಾಗೂ ಟೂತ್ಪೇಸ್ಟ್ ತಯಾರು ಮಾಡುವ ಉದ್ಯಮಗಳಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುತ್ತಿದೆ.

photo credit social media

ಬೇವಿನ ಸೊಪ್ಪಿನ ಔಷಧೀಯ ಗುಣಗಳು ನಮಗೆ ಬಹಳ ಹಿಂದಿನಿಂದ ಚಿರಪರಿಚಿತ. ಬೇವಿನ ಎಲೆಗಳನ್ನು ಅಡುಗೆ ಮಾಡಿ ಕೂಡ ಸೇವಿಸಬಹುದು ಎನ್ನುವ ವಿಚಾರ ನಿಮಗೆ ಹೊಸದಂತೆ ಕಾಣಬಹುದು. ಆದರೆ ಇದು ನಿಜ.

ಬೇವಿನ ಸೊಪ್ಪಿನ ಔಷಧೀಯ ಗುಣಗಳು ನಮಗೆ ಬಹಳ ಹಿಂದಿನಿಂದ ಚಿರಪರಿಚಿತ. ಏಕೆಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚರ್ಮದ ವ್ಯಾಧಿಗಳನ್ನು ನೈಸರ್ಗಿಕವಾಗಿ ಗುಣ ಪಡಿಸುವ ಏಕೈಕ ಸಸ್ಯ ಪದಾರ್ಥ ಎಂದರೆ, ಮೊದಲಿಗೆ ನಮಗೆ ನೆನಪಿಗೆ ಬರುವುದು ಬೇವಿನ ಸೊಪ್ಪು.

ಬೇವಿನ ಸೊಪ್ಪಿನಲ್ಲಿ ಆಂಟಿ - ಇಂಪ್ಲಾಮೇಟರಿ, ಆಂಟಿ - ಫಂಗಲ್ ಮತ್ತು ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಇವೆಯೆಂದು ಆಯುರ್ವೇದ ಪಂಡಿತರು ಹೇಳುತ್ತಾರೆ. ಹಾಗಾಗಿ ಬಹಳ ಹಿಂದಿನಿಂದ ತಮ್ಮ ಆಯುರ್ವೇದ ಪದ್ಧತಿಯಲ್ಲಿ ಕೆಲವೊಂದು ವಿಶೇಷ ಬಗೆಯ ಕಾಯಿಲೆಗಳನ್ನು ಗುಣ ಪಡಿಸುವುದಕ್ಕೆ ತಾವು ತಯಾರು ಮಾಡುವ ಔಷಧಿಗಳಲ್ಲಿ ಬೇವಿನ ಸೊಪ್ಪನ್ನು ಬಳಕೆ ಮಾಡುತ್ತಾ ಬಂದಿದ್ದಾರೆ.

ಇಂದಿಗೂ ಕೂಡ ಬೇವಿನ ಸೊಪ್ಪಿಗೆ ಔಷಧೀಯ ವಿಚಾರದಲ್ಲಿ ಅಷ್ಟೇ ಮೌಲ್ಯವಿದೆ. ಆದರೆ ನಮಗೆ ಇದುವರೆಗೂ ಕೇವಲ ಬೇವಿನ ಸೊಪ್ಪನ್ನು ರೋಗ ರುಜಿನಗಳನ್ನು ವಾಸಿ ಮಾಡುವ ಅದ್ಭುತ ಚಮತ್ಕಾರಿ ನೈಸರ್ಗಿಕ ಪದಾರ್ಥ ಎಂದು ಮಾತ್ರ ಗೊತ್ತಿತ್ತು.

ಬೇವಿನ ಸೊಪ್ಪನ್ನು ಬಳಸಿಕೊಂಡು ತಯಾರು ಮಾಡುವ ಕೆಲವೊಂದು ವಿಶೇಷ ಬಗೆಯ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಒಳ್ಳೆಯ ವಿಟಮಿನ್ ಅಂಶಗಳನ್ನು ಮತ್ತು ಖನಿಜಾಂಶಗಳನ್ನು ಒದಗಿಸುವುದು ಮಾತ್ರವಲ್ಲದೆ ಇವುಗಳಲ್ಲಿರುವ ಫ್ಯಾಟಿ ಆಸಿಡ್ ಮತ್ತು ಆಂಟಿ- ಆಕ್ಸಿಡೆಂಟ್ ಅಂಶಗಳು ನಮ್ಮ ದೇಹದ ಅಪೌಷ್ಟಿಕತೆಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮಧುಮೇಹವನ್ನು ಹೊಂದಿರುವ ವ್ಯಕ್ತಿಗಳಲ್ಲಿ ಬೇವಿನ ಸೊಪ್ಪು ನೈಸರ್ಗಿಕವಾಗಿ ಅವರ ದೇಹದ ಇನ್ಸುಲಿನ್ ಪ್ರಮಾಣವನ್ನು ಸಮತೋಲನ ಮಾಡಿ, ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸಿ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಚರ್ಮದ ಹಲವಾರು ಸಮಸ್ಯೆಗಳನ್ನು ದೂರ ಮಾಡುತ್ತದೆ.

ಬೇವಿನ ಸೊಪ್ಪಿನಿಂದ ಕೆಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಸೇವಿಸುವುದು ಕೇಳುವವರಿಗೆ ಸ್ವಲ್ಪ ಆಶ್ಚರ್ಯ ಎನಿಸಬಹುದು. ಆದರೆ ಬೇವಿನ ಸೊಪ್ಪಿನ ಖಾದ್ಯಗಳು ಇತ್ತೀಚಿನದೇನಲ್ಲ. ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ತಾಜಾ ಬೇವಿನ ಎಲೆಗಳಿಂದ ತಮ್ಮ ಆರೋಗ್ಯ ವೃದ್ಧಿಗಾಗಿ ಕೆಲವು ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಸೇವಿಸುತ್ತಿದ್ದರು.

ಬೇವಿನ ಸೊಪ್ಪು ನಮ್ಮ ದೇಹದಲ್ಲಿ ಅದರಲ್ಲೂ ವಿಶೇಷವಾಗಿ ಕರುಳಿನ ಭಾಗದಲ್ಲಿ ಕಂಡು ಬರುವ ಕೆಲವೊಂದು ಜಾತಿಯ ಹುಳುಗಳು ಮತ್ತು ಪರಾವಲಂಬಿ ಜೀವಿಗಳನ್ನು ನಾಶ ಪಡಿಸುತ್ತದೆ.