ಪೂರಿ ಉಬ್ಬಿ ಬರಲು ಟಿಪ್ಸ್

ಪೂರಿ ಮಾಡುವಾಗ ಅದು ಉಬ್ಬಿ ಬಂದು ಮೆತ್ತಗಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಏನೇ ಮಾಡಿದರೂ ಪೂರಿ ಹೋಟೆಲ್ ರೀತಿ ಉಬ್ಬಿ ಬರುತ್ತಿಲ್ಲ ಎಂಬ ಬೇಸರವೇ? ಹಾಗಿದ್ದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ

Photo Credit: Social Media

ಮೊದಲು ಪೂರಿ ಕಲಸಿಕೊಳ್ಳುವಾಗ ಅದಕ್ಕೆ ಬಿಸಿ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ

ಪೂರಿ ಕಲಸುವಾಗ ಅದಕ್ಕೆ ಹಾಲು ಅಥವಾ ಸ್ವಲ್ಪ ಮೊಸರು ಹಾಕಿಕೊಂಡರೆ ಉಬ್ಬಿ ಬರುತ್ತದೆ

ಪೂರಿ ಹಿಟ್ಟನ್ನು ಚೆನ್ನಾಗಿ ನಾದಿಕೊಂಡು ಅದರ ಮೇಲೆ ನೀರು ಚಿಮುಕಿಸಿ ಒದ್ದೆ ಬಟ್ಟೆ ಸುತ್ತಿ ಮುಚ್ಚಿಡಿ

ಪೂರಿ ಹಿಟ್ಟಿಗೆ ಗೋಧಿ ಅಥವಾ ಮೈದಾ ಹಿಟ್ಟಿನ ಜೊತೆ ಸ್ವಲ್ಪ ರವಾ ಸೇರಿಸಿ ಕಲಸಿಕೊಳ್ಲಿ

ಪೂರಿ ಹಿಟ್ಟು ಕಲಸುವಾಗ ಚೆನ್ನಾಗಿ ಎಣ್ಣೆ ಹಾಕಿ ಕಲಸಿಕೊಂಡು ಮೃದುವಾಗಿರುವಂತೆ ನೋಡಿಕೊಳ್ಳಿ

ಎಣ್ಣೆ ಚೆನ್ನಾಗಿ ಕಾದ ನಂತರವೇ ಪೂರಿಯನ್ನು ಬಿಟ್ಟರೆ ಪೂರಿ ಉಬ್ಬಿ ಬರುತ್ತದೆ