ಬಾತ್ ರೂಂ ಇರಲಿ, ಹಾಲ್ ಇರಲಿ ಟೈಲ್ಸ್ ಮೇಲೆ ಏನಾದರೂ ಆಹಾರ ಪದಾರ್ಥಗಳು ಬಿದ್ದು ಇಲ್ಲವೇ ಮಣ್ಣು ಬಿದ್ದು ಕಲೆಯಾಗುತ್ತದೆ. ಇದರಿಂದ ಟೈಲ್ಸ್ ಹೊಳಪು ಕಳೆದುಕೊಳ್ಳುತ್ತದೆ. ಟೈಲ್ಸ್ ಮೇಲಿನ ಕಲೆ ನಿವಾರಿಸುವುದು ಹೇಗೆ ಇಲ್ಲಿದೆ ಟಿಪ್ಸ್.
Photo Credit: Social Media
ಟೈಲ್ಸ್ ಮೇಲೆ ಆಹಾರ ಪದಾರ್ಥ, ಬಣ್ಣ, ಕೊಳೆ ಬಿದ್ದು ಕಲೆಯಾಗಿದ್ದರೆ ಅದನ್ನು ತಕ್ಷಣವೇ ತೆಗೆಯಬೇಕಾಗುತ್ತದೆ
ಕಲೆ ತೆಗೆಯುವ ಮೊದಲು ಟೈಲ್ಸ್ ನಲ್ಲಿರುವ ಕಸ, ಕೊಳೆಯನ್ನು ನೀಟಾಗಿ ಒರೆಸಿ ಕ್ಲೀನ್ ಮಾಡಿಕೊಳ್ಳಿ
ಬಳಿಕ ಕಲೆಯಾದ ಜಾಗಕ್ಕೆ ನೀರು ಹಾಕಿ ಸ್ವಲ್ಪ ಹೊತ್ತು ನೆನೆಯಲು ಬಿಡಿ
ಬೇಕಿಂಗ್ ಸೋಡಾ, ವಿನೇಗರ್ ಮತ್ತು ನಿಂಬೆ ಹಣ್ಣಿನ ರಸ ಬಳಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ
ಟೈಲ್ಸ್ ಕಲೆಯಾಗಿರುವ ಜಾಗಕ್ಕೆ ಈ ಮಿಶ್ರಣದ ಪೇಸ್ಟ್ ನ್ನು ಹಚ್ಚಿ ಚೆನ್ನಾಗಿ ಉಜ್ಜಿ
ಟೂತ್ ಬ್ರಷ್ ಅಥವಾ ಸ್ಪಾಂಜ್ ಬಳಸಿ ಕಲೆಯಿರುವ ಜಾಗವನ್ನು ಒರೆಸಿದರೆ ಉತ್ತಮ
ನೆನಪಿಡಿ, ಕಲೆಯಾದ ಜಾಗಕ್ಕೆ ಸ್ಕ್ರಬರ್ ಬಳಸಿ ಒರೆಸಿದಲ್ಲಿ ಟೈಲ್ಸ್ ಗೆ ಕಲೆಯಾಗುವ ಸಾಧ್ಯತೆಯಿರುತ್ತದೆ